ಮಡಿಕೇರಿ, ಜೂ. 28: ಕರ್ನಾಟಕ ಯಕ್ಷಗಾನ ಅಕಾಡೆಮಿಯಿಂದ 2019-20ನೇ ಸಾಲಿನಲ್ಲಿ ಸಾಮಾನ್ಯ ಯೋಜನೆಯಡಿ 2 ತಿಂಗಳ ಯಕ್ಷಗಾನ ತರಬೇತಿಗೆ (ತೆಂಕುತಿಟ್ಟು, ಬಡಗುತಿಟ್ಟು, ಬಡಾಬಡಗುತಿಟ್ಟು) ಕಲಾವಿದರುಗಳಿಂದ-ಕಲಾ ತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಯಕ್ಷಗಾನ ತರಬೇತಿಯನ್ನು ಕನಿಷ್ಟ 10 ಮಂದಿಗೆ ನೀಡಬಯಸುವ ಆಸಕ್ತ ಕಲಾವಿದರು, ಕಲಾ ಸಂಸ್ಥೆಗಳು ಅರ್ಜಿ ಸಲ್ಲಿಸಬಹುದಾಗಿದೆ. 2018-19ನೇ ಸಾಲಿನಲ್ಲಿ ಯಕ್ಷಗಾನ ತರಬೇತಿಗೆ ಅವಕಾಶ ಪಡೆದ ಕಲಾಸಂಸ್ಥೆ, ಕಲಾವಿದರಿಗೆ ಅವಕಾಶವಿರುವದಿಲ್ಲ.

ಉಳಿದ ಕಲಾಸಂಸ್ಥೆ, ಕಲಾವಿದರು ಅರ್ಜಿ ಸಲ್ಲಿಸಬಹುದಾಗಿದೆ. ಯಕ್ಷಗಾನ ತರಬೇತಿ ನೀಡಬಯಸುವ ಆಸಕ್ತ ಕಲಾವಿದರುಗಳು, ಕಲಾ ಸಂಸ್ಥೆಗಳು ತಮ್ಮ ಮನವಿಯನ್ನು ಜುಲೈ 15 ರೊಳಗೆ ರಿಜಿಸ್ಟ್ರಾರ್, ಕರ್ನಾಟಕ ಯಕ್ಷಗಾನ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಚಾಲುಕ್ಯ ವಿಭಾಗ, ಜೆ.ಸಿ. ರಸ್ತೆ, ಬೆಂಗಳೂರು 560002 ಇಲ್ಲಿಗೆ ಕಳುಹಿಸಬೇಕು.

ಹೆಚ್ಚಿನ ಮಾಹಿತಿಗೆ ಅಕಾಡೆಮಿಯ ಕಚೇರಿ ದೂ. 080-22113146 ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರು ತಿಳಿಸಿದ್ದಾರೆ.