ಮಡಿಕೇರಿ, ಜೂ. 27: ಗೋಣಿಕೊಪ್ಪ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಕೃತಿಕ ವಿಕೋಪ ಸಂತ್ರಸ್ತರಿಗಾಗಿ ನಿರ್ಮಿಸಲಾಗಿರುವ ಎರಡು ಮನೆಗಳ ಉದ್ಘಾಟನಾ ಕಾರ್ಯಕ್ರಮ ತಾ. 28 ರಂದು (ಇಂದು) ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.

ಸೂರ್ಲಬ್ಬಿಯಲ್ಲಿ ನಿರ್ಮಿಸಿರುವ ಮನೆಯನ್ನು ಶ್ರೀನಿವಾಸ್ ಹಾಗೂ ಕುಂಬೂರುಬಾಣೆಯಲ್ಲಿ ನಿರ್ಮಿಸಿರುವ ಮನೆಯನ್ನು ಸಿ.ಎ. ಮುತ್ತಣ್ಣ ಅವರುಗಳು ಉದ್ಘಾಟಿಸುವರು ಎಂದು ಲಯನ್ಸ್ ಪ್ರಕಟಣೆ ತಿಳಿಸಿದೆ.