ಮಡಿಕೇರಿ, ಜೂ. 28: ಜ್ಞಾನಗಂಗಾ ವಸತಿ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿ ಸಂಘದ ಚುನಾವಣೆ ನಡೆಯಿತು. ಮತದಾನವನ್ನು 4ನೇ ತರಗತಿಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು ನೆರವೇರಿಸಿದರು.

ಚುನಾವಣೆಯಲ್ಲಿ ಮತದಾನದ ಇನ್ನೊಂದು ವಿಶೇಷವೆಂದರೆ ಮೊದಲ ಬಾರಿಗೆ ಗಣಕೀಕೃತ ಮತದಾನದ ವ್ಯವಸ್ಥೆಯನ್ನು ಅಳವಡಿಸಿಕೊಂಡು ಮತದಾನ ಮಾಡಲಾಯಿತು. ಶಾಲೆಯ ವಿದ್ಯಾರ್ಥಿ ಸಂಘದ ನಾಯಕನಾಗಿ 10ನೇ ತರಗತಿಯ ಶಾವಂತ ಎಸ್.ಎಂ, ಉಪನಾಯಕನಾಗಿ 9ನೇ ತರಗತಿಯ ಆಧ್ಯಾನ್ ಮಲ್ಲಿಕ್, ಸಾಂಸ್ಕøತಿಕ ಮಂತ್ರಿಯಾಗಿ 10ನೇ ತರಗತಿಯ ಪ್ರಭಂಜನ್, ಆರೋಗ್ಯ ಮಂತ್ರಿಯಾಗಿ 9ನೇ ತರಗತಿಯ ಪ್ರತೀಕ್ಷಾ, ಶಿಸ್ತಿನ ನಾಯಕನಾಗಿ 10ನೇ ತರಗತಿಯ ತರುಣ್ ಕೆ, ಕ್ರೀಡಾ ಮಂತ್ರಿಯಾಗಿ 10ನೇ ತರಗತಿಯ ನಿತಿನ್ ಕಾರ್ತಿಕ್ ಆಯ್ಕೆಯಾದರು.

ಚುನಾವಣೆಯ ಪೂರ್ಣ ಉಸ್ತುವಾರಿಯನ್ನು ಪ್ರಾಂಶುಪಾಲ ಜಿ.ಜಿ. ಜೋಸ್ ವಹಿಸಿಕೊಂಡಿದ್ದು, ಇವರೊಂದಿಗೆ ಶಿಕ್ಷಕರಾದ ಹರೀಶ್‍ಕುಮಾರ್, ಶಿಕ್ಷಕಿಯರಾದ ರಶ್ಮಿ, ಪದ್ಮಾವತಿ, ನಮಿತಾ ಹಾಗೂ ದೈಹಿಕ ಶಿಕ್ಷಕರು ಸಹಕರಿಸಿದರು.