ಕೂಡಿಗೆ, ಜೂ. 28: ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ 2019-20ನೇ ಸಾಲಿನ ಮೊದಲನೇ ಹಂತದ ವಾರ್ಡ್ ಸಭೆಗಳು ಆಯಾಯ ವಾರ್ಡಿನ ಸದಸ್ಯರ ಅಧ್ಯಕ್ಷತೆಯಲ್ಲಿ ನಡೆಯಲಿವೆ.
ಗೊಂದಿಬಸವನಹಳ್ಳಿ ವಾರ್ಡಿನ ಸಭೆಯು ಜುಲೈ 1 ರಂದು ವಾರ್ಡಿನ ಸದಸ್ಯ ಜಿ.ಬಿ. ಜಗದೀಶ್ ಅಧ್ಯಕ್ಷತೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.
ಗುಮ್ಮನಕೊಲ್ಲಿ-5ನೇ ವಾರ್ಡಿನ ಸಭೆಯು ಎಂ. ಗಣೇಶ್ ಅಧ್ಯಕ್ಷತೆಯಲ್ಲಿ ಗುಮ್ಮನಕೊಲ್ಲಿ ಅಂಗನವಾಡಿ ಕೇಂದ್ರದಲ್ಲಿ, ಗುಮ್ಮನಕೊಲ್ಲಿ-4ನೇ ವಾರ್ಡಿನ ಸಭೆಯು ಸರಸ್ವತಿ ಅಧ್ಯಕ್ಷತೆಯಲ್ಲಿ ಗುಮ್ಮನಕೊಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದ್ದು, ಮುಳ್ಳುಸೋಗೆ-3ನೇ ವಾರ್ಡಿನ ಸಭೆ ಕೆ.ಎನ್. ಸುರೇಶ್ ಅಧ್ಯಕ್ಷತೆಯಲ್ಲಿ ಮುಳ್ಳುಸೋಗೆ ಬಲಮುರಿ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.
ಮುಳ್ಳುಸೋಗೆ-2ನೇ ವಾರ್ಡಿನ ಸಭೆ ರಾಧ ಅಧ್ಯಕ್ಷತೆಯಲ್ಲಿ ಜನತಾ ಕಾಲೋನಿಯ ಅಂಗನವಾಡಿ ಕೇಂದ್ರದಲ್ಲಿ ನಡೆಯಲಿದ್ದು, ಮುಳ್ಳುಸೋಗೆ ಮೊದಲ ವಾರ್ಡಿನ ಸಭೆಯು ಜುಲೈ 4 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.
ಸಭೆಯಲ್ಲಿ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಲಿದ್ದು, ಅಧ್ಯಕ್ಷರ ಅನುಮತಿ ಮೇರೆಗೆ ಇತರ ವಿಷಯಗಳ ಚರ್ಚೆ ನಡೆಯಲಿವೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜಶೇಖರ್ ತಿಳಿಸಿದ್ದಾರೆ.