ಚೆಟ್ಟಳ್ಳಿ, ಜೂ. 28: ಕುಶಾಲನಗರದ ಕೋಟಿಚೆನ್ನಯ್ಯ ಬಿಲ್ಲವ ಸಮಾಜದ 8ನೇ ಮಹಾಸಭೆ ಮತ್ತು ವಾರ್ಷಿಕೋತ್ಸವ ತಾ.30ರಂದು ಅಪರಾಹ್ನ 9 ಗಂಟೆಗೆ ಅಧ್ಯಕ್ಷ ಹೆಚ್.ಬಿ. ರಮೇಶ್ ಅವರ ಅಧ್ಯಕ್ಷತೆಯಲ್ಲಿ ಕುಶಾಲನಗರ ಕೊಡವ ಸಮಾಜದಲ್ಲಿ ನಡೆಯಲಿದೆ.
ಪೂರ್ವಾಹ್ನ 9.30ಕ್ಕೆ ಗುರು ಪೂಜೆ, 9.40ರಿಂದ ಕ್ರೀಡಾಕೂಟ, 2.30ಕ್ಕೆ ಸಾಂಸ್ಕøತಿಕ ಕಾರ್ಯಕ್ರಮ, ವಾರ್ಷಿಕ ವರದಿ ಮಂಡನೆ, ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣೆ, ಕಾರ್ಯಕಾರಿ ಸಮಿತಿಯ ಸದಸ್ಯರ ಆಯ್ಕೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.