ಸೋಮವಾರಪೇಟೆ,ಜೂ.27: ಕೃಷಿ ಇಲಾಖೆ ವತಿಯಿಂದ ಮುಂಗಾರು ಹಂಗಾಮಿಗೆ ತಾಲೂಕಿನ ಆಯಾ ಹೋಬಳಿ ರೈತ ಸಂಪರ್ಕ ಕೇಂದ್ರದಲ್ಲಿ ಮುಸುಕಿನ ಜೋಳ ಮತ್ತು ಭತ್ತದ ಬಿತ್ತನೆ ಬೀಜವನ್ನು ಸಹಾಯಧನದಲ್ಲಿ ವಿತರಿಸಲಾಗುತ್ತಿದ್ದು, ರೈತರು ಸೌಲಭ್ಯವನ್ನು ಸದುಪಯೊಗ ಪಡಿಸಿಕೊಳ್ಳಬೇಕೆದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರಾಜಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಸುಕಿನ ಜೋಳ ತಳಿಗಳಾದ ಗಂಗಾ ಕಾವೇರಿ, ಜಿ.ಕೆ-3059, ಸಿ.ಪಿ-818, ಪೈನಿಯರ್-30ಬಿ07, ಕಾವೇರಿ 25-ಕೆ55 ತಳಿಗಳ ಬಿತ್ತನೆ ಬೀಜಗಳು ಗುಡ್ಡೆಹೊಸೂರು, ಕೂಡಿಗೆ, ತೊರೆನೂರು, ಶನಿವಾರಸಂತೆ, ಸಹಕಾರ ಸಂಘಗಳಲ್ಲಿ ಹಾಗೂ ಕುಶಾಲನಗರ, ಸೋಮವಾರಪೇಟೆ, ಕೊಡ್ಲಿಪೇಟೆ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದೆ.
ಅಧಿಕ ಇಳುವರಿ ಭತ್ತಗಳಾದ ತುಂಗ, ಬಿ.ಆರ್2655(ಬಾಂಗ್ಲಾ ರೈಸ್), ತನು, ಐ.ಅರ್.64, ಅತಿರ ತಳಿಗಳು ರೈತ ಸಂಪರ್ಕ ಕೇಂದ್ರದಲ್ಲಿ ದೊರೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕೃಷಿ ಅಧಿಕಾರಿ ಹಾಗೂ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ.