ಮಡಿಕೇರಿ, ಜೂ. 27: ಮೈಸೂರು - ಮಡಿಕೇರಿಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಆದ್ಯತಾ ಕಾಮಗಾರಿ ಪಟ್ಟಿಯಲ್ಲಿ ಸೇರಿಸು ವಂತೆ ಸಂಸದ ಪ್ರತಾಪ್ ಹಿಂಹ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರನ್ನು ಒತ್ತಾಯಿಸಿದ್ದಾರೆ. ದೆಹಲಿಯಲ್ಲಿ ಸಚಿವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ ಸಂಸದರು ಈ ಕಾಮಗಾರಿ ಕುರಿತು ಗೆಜೆಟ್ ನೊಟಿಫಿಕೇಶನ್‍ಗೆ ಕಳುಹಿಸಿದರೂ ಪ್ರಥಮ
(ಮೊದಲ ಪುಟದಿಂದ) ಆದ್ಯತೆಯ ಮೇಲೆ ಇಲಾಖೆ ಇದನ್ನು ಪರಿಗಣಿಸಿಲ್ಲ; ಚುನಾವಣೆ ಹಿನ್ನೆಲೆಯಲ್ಲಿ ಕೂಡ ಮೂರು ತಿಂಗಳ ಕಾಲ ವಿಳಂಬವಾಗಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ. ವಾಹನಗಳ ಸಾಂದ್ರತೆ ಹೆಚ್ಚಾಗಿದ್ದು, ಪ್ರಥಮ ಆದ್ಯತೆಯ ಪಟ್ಟಿಯಲ್ಲಿ ಮೈಸೂರು - ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯನ್ನು ಪರಿಗಣಿಸುವಂತೆ ವಿನಂತಿಸಿದ್ದಾರೆ.