ಮಡಿಕೇರಿ, ಜೂ. 28: ವೀರಾಜಪೇಟೆ ಅರಣ್ಯ ವಲಯದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಾದ ಕೆದಮುಳ್ಳೂರು, ಬಾರಿಕಾಡು, ಕೊಟ್ಟಚ್ಚಿ, ತೋರ, ಹೆಗ್ಗಳ, ಪಾಲಂಗಾಲ, ಎಡಮಕ್ಕಿ ಗ್ರಾಮಗಳ ವ್ಯಾಪ್ತಿಯಲ್ಲಿ ತಾ. 30 ರಂದು (ನಾಳೆ) ಅರಣ್ಯ ಇಲಾಖೆಯಿಂದ ಕಾಡಾನೆಗಳನ್ನು ಮರಳಿ ಕಾಡಿಗಟ್ಟುವ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ.
ಆ ದಿನದಂದು ಸಾರ್ವಜನಿಕರು, ಶಾಲಾ ಮಕ್ಕಳು, ಕಾರ್ಮಿಕರು, ತೋಟ ಮಾಲೀಕರು ಎಚ್ಚರದಿಂದಿರುವಂತೆ ವಲಯ ಅರಣ್ಯಾಧಿಕಾರಿ ಕೆ.ಪಿ. ಗೋಪಾಲ್ ಕೋರಿದ್ದಾರೆ.