ಮಡಿಕೇರಿ, ಜೂ. 27: 7ನೇ ತರಗತಿಯಿಂದ ಪದವಿಯವರೆಗೆ ವ್ಯಾಸಂಗ ಮಾಡುತ್ತಿರುವ ಜಿಲ್ಲೆಯ ಬಡ ಮುಸ್ಲಿಂ ವಿದ್ಯಾರ್ಥಿಗಳಿಗೆ ಮಡಿಕೇರಿಯ ಅಂಜುಮಾನ್ ತ್‍ನ್‍ಜೀಮೇ ಮಿಲ್ಲತ್ ಸಂಸ್ಥೆಯ ವತಿಯಿಂದ ಉಚಿತ ಪುಸ್ತಕಗಳನ್ನು ವಿತರಿಸಲಾಯಿತು.

ತಾ. 29 ರಂದು (ನಾಳೆ) ಮಧ್ಯಾಹ್ನ 2 ಗಂಟೆಗೆ ನಗರದ ಕೂರ್ಗ್ ಕಮ್ಯೂನಿಟಿ ಹಾಲ್‍ನಲ್ಲಿ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಯಾಂಡಲ್‍ವುಡ್ ಎಸ್ಟೇಟ್‍ನ ಮಾಲೀಕ ಝಹೀರ್ ಅವರು ವಹಿಸಲಿದ್ದಾರೆ. ವಕೀಲರುಗಳಾದ ಕೆ.ಎಂ. ಕುಂಞÂ ಅಬ್ದುಲ್ಲ, ಅಬೂಬಕ್ಕರ್, ಸ್ಯಾಂಡಲ್‍ಕಾಡ್ ಎಸ್ಟೇಟ್ ಮಾಲೀಕ ನಿಝಾಮುದ್ದೀನ್ ಸಿದ್ದೀಖಿ, ಶಕ್ತಿ ಪತ್ರಿಕೆಯ ಉಪಸಂಪಾದಕ ಎಂ.ಇ. ಮಹಮದ್, ಮಕ್ಕಾ ಮಸೀದಿಯ ಧರ್ಮಗುರು ಮೌಲಾನ ಅಬ್ದುಲ್ ಹಕೀಂ, ನಿಸಾರ್ ಅಹಮದ್ ಇವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಂ.ಹೆಚ್. ಮೊಹಮದ್ ಹಾಜಿ ತಿಳಿಸಿದ್ದಾರೆ.