ವೀರಾಜಪೇಟೆ, ಜೂ. 26: ವೀರಾಜಪೇಟೆಯಲ್ಲಿ ತೂಕ್‍ಬೊಳಕು ಕಲೆ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಸೈನಿಕ ಜಾಗೃತಿ ಕಾರ್ಯಕ್ರಮ ಪ್ರಯುಕ್ತ ಪಟ್ಟಣದ ಮಿನಿ ವಿಧಾನ ಸೌಧದ ಎದುರಿಗೆ ಇರುವ ಯೋಧರ ಸ್ಮಾರಕಕ್ಕೆ ನಮನ ಸಲ್ಲಿಸಲಾಯಿತು.
ಈ ಸಂದರ್ಭ ಮೆ.ಜ. ಕುಪ್ಪಂಡ ನಂಜಪ್ಪ, ಬ್ರಿಗೇಡಿಯರ್ ಚೇನಂಡ ಚಿಯಣ್ಣ, ಮೆ.ಜ. ಬಾಚಮಾಡ ಕಾರ್ಯಪ್ಪ, ವೀರಾಜಪೇಟೆಯ ಕೊಡಗು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಚೇಂದ್ರಿಮಾಡ ಗಣೇಶ್ ನಂಜಪ್ಪ, ಉಪಾಧ್ಯಕ್ಷ ಚಪ್ಪಂಡ ಹರೀಶ್ ಹಾಗೂ ಸದಸ್ಯ ಪುಗ್ಗೇರ ನಂದಾ, ತೂಕ್‍ಬೊಳಕು ಕಲೆ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮುಲ್ಲೇಂಗಡ ಶಂಕರಿ ಪೊನ್ನಪ್ಪ ಹಾಗೂ ಸಂತ ಅನ್ನಮ್ಮ ಶಾಲೆಯ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ದೊಡ್ಡಟ್ಟಿ ಚೌಕಿಯ ಅಪ್ಪಚ್ಚ ಕವಿ ವೃತ್ತದಿಂದ ಪಥಸಂಚಲನ ನಡೆಸಿದರು.