ಸಿದ್ದಾಪುರ, ಜೂ. 26: ತಾಯಿಗೆ ಹೊಡೆಯುತ್ತಿದ್ದುದ್ದನ್ನು ಪ್ರಶ್ನಿಸಿದ ಮಗನಿಗೆ ತಂದೆ ಕತ್ತಿಯಿಂದ ಕಡಿದು ಗಾಯಗೊಳಿಸಿರುವ ಘಟನೆ ಮಾಲ್ದಾರೆ ಗ್ರಾಮದ ದಿಡ್ಡಳ್ಳಿಯಲ್ಲಿ ನಡೆದಿದೆ.
ದಿಡ್ಡಳ್ಳಿ ನಿವಾಸಿ ಪ್ರಕಾಶ ಎಂಬಾತ ಆತನ ಪತ್ನಿಯೊಂದಿಗೆ ವಿನಾಕಾರಣ ಕಲಹ ನಡೆಸುತ್ತಿದ್ದನು. ಅಲ್ಲದೆ ಹಲ್ಲೆಗೆ ಮುಂದಾದ ಎನ್ನಲಾಗಿದೆ. ಇದನ್ನು ಪ್ರಶ್ನಿಸಿದ ಆತನ ಮಗನ ಮೇಲೆ ಕೋಪಗೊಂಡು ಪ್ರಕಾಶನು ಮಗ ಪ್ರದೀಪನ ತಲೆ ಹಾಗೂ ಕೈಗೆ ಕಡಿದ ಪರಿಣಾಮ ಗಂಭೀರ ಗಾಯವಾಗಿರುತ್ತದೆ . ಗಾಯಾಳುವಿಗೆ ಸಿದ್ದಾಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪ್ರಕಾಶನ ವಿರುದ್ಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ಆರೋಪಿ ಪ್ರಕಾಶನ ಪತ್ತೆಗೆ ಬಲೆ ಬೀಸಿದ್ದಾರೆ.