ಸೋಮವಾರಪೇಟೆ, ಜೂ. 26: ಸಮೀಪದ ತೋಳೂರುಶೆಟ್ಟಳ್ಳಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ಗೆ ಜೀವ ವಿಮಾ ಸಂಗ್ರಹದ ಸಾಧನೆಗಾಗಿ ‘ಸ್ಟಾರ್ ಎಂಡಿಆರ್ಟಿ’ ಪ್ರಶಸ್ತಿ ಲಭಿಸಿದೆ.
ದೇಶದಲ್ಲಿಯೇ ಅತೀ ಹೆಚ್ಚು ಎಸ್ಬಿಐ ಜೀವ ವಿಮೆಯ ಪ್ರೀಮಿಯಮ್ ಸಂಗ್ರಹಿಸಿದ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ತೋಳೂರುಶೆಟ್ಟಳ್ಳಿ ಶಾಖೆ ಭಾಜನವಾಗಿದ್ದು, ಈ ಸಾಧನೆಗಾಗಿ ಕರ್ನಾಟಕ ಗ್ರಾಮೀಣ ಬ್ಯಾಂಕ್ನ ಅಧ್ಯಕ್ಷ ಶ್ರೀನಾಥ್ ಜೋಷಿ ಅವರು, ಶಾಖಾ ವ್ಯವಸ್ಥಾಪಕ ರಘುಚಂದ್ರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.