ಮಡಿಕೇರಿ, ಜೂ. 26: ಕೆ.ಆರ್. ನಗರ ಎಡತೊರೆ ಶಂಕರ ಮಠದ ಪೀಠಾಧ್ಯಕ್ಷರಾದ ಶ್ರೀ ಶಂಕರ ಭಾರತಿ ಮಹಾಸ್ವಾಮೀಜಿ ಅವರು; ತಾ. 27 ರಂದು (ಇಂದು) ಸಂಜೆ 4 ಗಂಟೆಗೆ ನಗರದ ವೇದಾಂತ ಸಂಘಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ‘ಭಾಷ್ಯಾಮೃತ ವಾಹಿನೀ’ ಉಪನ್ಯಾಸ ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಅವರು; ಸಂಜೆ 6 ಗಂಟೆಗೆ ಕುಶಾಲನಗರ ಬ್ರಾಹ್ಮಣ ಸಮಾಜದ ಸಭೆಯಲ್ಲೂ ಉಪಸ್ಥಿತರಿದ್ದು, ಪ್ರವಚನ ನೀಡಲಿದ್ದಾರೆ. ತಾ. 23 ರಿಂದ ನಡೆಯುತ್ತಿರುವ ಸಪ್ತಾಹವು ತಾ. 28 ರಂದು ಮುಕ್ತಾಯಗೊಳ್ಳಲಿದೆ.