ಮಡಿಕೇರಿ, ಜೂ. 26: ವ್ಯಾಪಕ ಮರಗಳ್ಳತನ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ನೋಬನ್ ಹಾಗೂ ಇತರ ಮೂವರು ಆರೋಪಿಗಳಾದ ಅಯ್ಯಪ್ಪ, ರಾಜೇಂದ್ರ, ದಾವೂದ್‍ನನ್ನು ಇಂದು ವೀರಾಜಪೇಟೆ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು.ಆರೋಪಿಗಳ ಜಾಮೀನು ಅರ್ಜಿ ಸಂಬಂಧ ವಿಚಾರಣೆ ನಡೆಸುವದ ರೊಂದಿಗೆ; ವಾದ - ಪ್ರತಿವಾದ ಆಲಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ತಾ. 28ಕ್ಕೆ (ನಾಳೆಗೆ) ವಿಚಾರಣೆ ಮುಂದೂಡಿದ್ದಾರೆ.ಪೊಲೀಸ್ ಇಲಾಖೆಯ ಪರವಾಗಿ ಸರಕಾರಿ ವಕೀಲರು; ಆರೋಪಿಗಳ ಪರ ವಕೀಲರ ವಾದವನ್ನು ತಳ್ಳಿ ಹಾಕುವದರೊಂದಿಗೆ ಜಾಮೀನು ನೀಡದಂತೆ ನ್ಯಾಯಾಲಯದ ಗಮನ ಸೆಳೆದರೆಂದು ತಿಳಿದುಬಂದಿದೆ.