ವೀರಾಜಪೇಟೆ, ಜೂ. 26: ಕರ್ನಾಟಕ ರಂಗ ಪರಿಷತ್ತು, ಬೆಂಗಳೂರು ರಂಗಭೂಮಿ ಪ್ರತಿಷ್ಠಾನ (ರಿ) ಕೊಡಗು ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು, ವೀರಾಜಪೇಟೆ ಇವರ ಸಂಯುಕ್ತ್ತ ಆಶ್ರಯದಲ್ಲಿ ತಾ. 27ರಂದು (ಇಂದು) “ಸಿಜಿಕೆ ರಂಗಪುರಸ್ಕಾರ” ಕಾರ್ಯಕ್ರಮ ಸರಕಾರಿ ಪ್ರಥಮ ದರ್ಜೆ ಕಾಲೇಜು (ಛತ್ರಕೆರೆ) ಸೆಮಿನಾರ್ ಸಭಾಂಗಣದಲ್ಲಿ ನಡೆಯಲಿದೆ.
ಕೊಡಗಿನ ಹಿರಿಯ ರಂಗನಟ ತೆನ್ನೀರ ರಮೇಶ್ ಈ ಪುರಸ್ಕಾರಕ್ಕೆ ಭಾಜನರಾಗಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ನಡೆಯುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ತಾತೀರ ಬೋಪಯ್ಯ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಪೂಮಾಲೆ ಪತ್ರಿಕೆ ಸಂಪಾದಕ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಅಡ್ಡಂಡ ಕಾರ್ಯಪ್ಪ, ಉಪಸ್ಥಿತರಿರುತ್ತಾರೆ.