ಮಡಿಕೇರಿ, ಜೂ. 25: ಅಧಿಕಾರಿಗಳು ಹಾಗೂ ಮೋಜಣಿದಾರರ ಸಂಘ ಕೊಡಗು ವೃತ್ತದ ವಾರ್ಷಿಕ ಸಭೆ ಅಧ್ಯಕ್ಷ ಕಳ್ಳೀರ ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ತಾ. 30 ರಂದು ಬೆಳಿಗ್ಗೆ 11 ಗಂಟೆಗೆ ಅರಣ್ಯ ಭವನದ ಸಭಾಂಗಣದಲ್ಲಿ ನಡೆಯಲಿದೆ.
ಸಭೆಯಲ್ಲಿ ಜೇಷ್ಠತಾ ಪಟ್ಟಿಯಲ್ಲಿನ ನ್ಯೂನತೆ, ಉಪವಲಯ ಅರಣ್ಯ ಅಧಿಕಾರಿಗಳ ವೇತನ ತಾರತಮ್ಯ, ಅರಣ್ಯ ಸಿಬ್ಬಂದಿಗಳ ನೀಡುವ ಭತ್ಯೆ ಪರಿಷ್ಕರಣೆ ಮತ್ತು ಉಪವಲಯ ಅರಣ್ಯ ಅಧಿಕಾರಿಗಳ ಕುಂದು ಕೊರತೆ ಬಗ್ಗೆ ಚರ್ಚೆ ನಡೆಸಿ ಅಧಿಕಾರಿಗಳು ಮತ್ತು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವದು. ಸಭೆಗೆ ಅಧಿಕ ಸಂಖ್ಯೆಯ ಉಪವಲಯ ಅರಣ್ಯ ಅಧಿಕಾರಿಗಳು ಭಾಗವಹಿಸುವಂತೆ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಪಿ. ರಂಜನ್ ಮನವಿ ಮಾಡಿದ್ದಾರೆ.