*ಗೋಣಿಕೊಪ್ಪಲು, ಜೂ. 25: ವೀರಾಜಪೇಟೆ ತಾಲೂಕು ಪಶು ಸಂಗೋಪನಾ ಇಲಾಖೆ ವತಿಯಿಂದ ನೀಡುವ ಪುಣ್ಯಕೋಟಿ ಕಿಟ್ ಮತ್ತು ಕರುಗಳಿಗೆ ಪಶು ಆಹಾರವನ್ನು ಶಾಸಕ ಕೆ.ಜಿ. ಬೋಪಯ್ಯ ಫಲಾನುಭವಿಗಳಿಗೆ ವಿತರಿಸಿದರು.
ಪೆÇನ್ನಂಪೇಟೆ ಶಾಸಕರ ಕಚೇರಿಯಲ್ಲಿ ಪೆÇನ್ನಂಪೇಟೆ ವ್ಯಾಪ್ತಿಯ ಸುಮಾರು 16 ಫಲಾನುಭವಿಗಳಿಗೆ ಪಶುಸಂಗೋಪನಾ ಇಲಾಖೆ ವಿವಿಧ ಸೌಕರ್ಯಗಳ ಕಿಟ್‍ಗಳನ್ನು ನೀಡಿತು. ಈ ಸಂದರ್ಭ ಜಿಲ್ಲಾ ಬಿಜೆಪಿ ವರ್ತಕರ ಪ್ರಕೋಷ್ಠ ಅಧ್ಯಕ್ಷ ಕಡೇಮಾಡ ಗಿರೀಶ್ ಗಣಪತಿ, ಪೆÇನ್ನಂಪೇಟೆ ಸ್ಥಾನೀಯ ಸಮಿತಿ ಅಧ್ಯಕ್ಷ ಮುದ್ದೆಯಡ ಮಂಜು, ಪಶು ಸಂಗೋಪನಾ ಇಲಾಖೆಯ ಪ್ರಭಾರ ಉಪನಿರ್ದೇಶಕ ಡಾ. ಎ.ಬಿ. ತಮ್ಮಯ್ಯ ಹಾಗೂ ಫಲಾನುಭವಿಗಳು ಹಾಜರಿದ್ದರು.