ಕುಶಾಲನಗರ, ಜೂ. 25: ಕೊಡಗು ಜಿಲ್ಲೆಯ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಪ್ರಸಕ್ತ ವರ್ಷದಲ್ಲಿ ಹೆಚ್ಚುವರಿ ಆಗಿದ್ದಾರೆ ಎನ್ನಲಾದ ಶಿಕ್ಷಕರಿಗೆ ಸೋಮವಾರ ತಡರಾತ್ರಿ ಏರ್ಪಡಿಸಿದ್ದ ಸ್ಥಳ ನಿಯೋಜನೆ ಪ್ರಕ್ರಿಯೆಯಲ್ಲು ಹೆಚ್ಚುವರಿ ಶಿಕ್ಷಕರು ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ಖಂಡಿಸಿ ಪ್ರತಿಭಟಿಸಿದರು.
ಜಿಲ್ಲೆಯ ವಿವಿಧ ಶಾಲೆಗಳ ಹತ್ತಕ್ಕೂ ಹೆಚ್ಚು ಶಿಕ್ಷಕರನ್ನು ಹೆಚ್ಚುವರಿ ಎಂದು ಶಿಕ್ಷಣ ಇಲಾಖೆ ಗುರುತಿಸಿರುವ ಕ್ರಮವೇ ಅವೈಜ್ಞಾನಿಕ ಎಂದು ಶಿಕ್ಷಕರು ಡಿಡಿಪಿಐ ಮಚ್ಚಾಡೋ ಅವರ ಬಳಿ ಅಳಲು ತೋಡಿಕೊಂಡರು.