ಗೋಣಿಕೊಪ್ಪಲು, ಜೂ. 25: ಗೋಣಿಕೊಪ್ಪ ಲಯನ್ಸ್ ಕ್ಲಬ್‍ನ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭ ತಾ. 28 ರಂದು ಸಂಜೆ 6.30 ಗಂಟೆಗೆ ಗೋಣಿಕೊಪ್ಪದ ಸ್ಪೈಸ್ ರಾಕ್ ಸಭಾಂಗಣದಲ್ಲಿ ಅಧ್ಯಕ್ಷ ಸ್ಮರಣ್ ಸುಭಾಷ್ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕಳ್ಳಂಗಡ ನಿತಿ ಪೂಣಚ್ಚ, ಕಾರ್ಯದರ್ಶಿಯಾಗಿ ಡಾ. ಅಮ್ಮಂಡ ಚಿಣ್ಣಪ್ಪ, ಖಜಾಂಚಿಯಾಗಿ ಅಲ್ಲುಮಾಡ ಸುನೀಲ್, ಉಪಾಧ್ಯಕ್ಷರುಗಳಾಗಿ ಕೊಂಗಂಡ ಅಚ್ಚಯ್ಯ, ಪಾರುವಂಗಡ ಜೀವನ್ ಸೇರಿದಂತೆ ಇತರ ಪದಾಧಿಕಾರಿಗಳು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಪದಗ್ರಹಣ ಕಾರ್ಯಕ್ರಮಕ್ಕೆ ಬೆಂಗಳೂರಿನ ಮಾಜಿ ಲಯನ್ಸ್ ಜಿಲ್ಲಾ ರಾಜ್ಯಪಾಲ ಶ್ರೀನಿವಾಸ್ ಆಗಮಿಸಲಿದ್ದು, ಅತಿಥಿಗಳಾಗಿ ಪ್ರಾಂತೀಯ ಅಧ್ಯಕ್ಷ ಬೋಸ್ ಪೆಮ್ಮಯ್ಯ, ವಲಯ ಅಧ್ಯಕ್ಷ ಡಾ. ಸೂರಜ್ ಉತ್ತಪ್ಪ, ಎ.ಎಸ್. ಮಹೇಶ್ ಹಾಗೂ ಜೆ.ವಿ. ಕೋಟಿ ಭಾಗವಹಿಸಲಿದ್ದಾರೆ.