ಮಡಿಕೇರಿ, ಜೂ. 25: ಮಡಿಕೇರಿ ನಗರ ಹಿತರಕ್ಷಣಾ ವೇದಿಕೆ ಹಾಗೂ ‘ವಿಕಾಸ್ ಜನಸೇವಾ ಟ್ರಸ್ಟ್’ ಸಂಯುಕ್ತಾಶ್ರಯದಲ್ಲಿ ನಗರದ ಬೀದಿಗಳಲ್ಲಿ ಓಡಾಡಿಕೊಂಡು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ 4 ಮಂದಿ ಮಾನಸಿಕ ಅಸ್ವಸ್ಥರನ್ನು ಗುರುತಿಸಿ, ಅವರಿಗೆ ಕೇಶ ವಿನ್ಯಾಸ ಮಾಡಿಸಿ ಸ್ವಚ್ಛಗೊಳಿಸಿ, ಬೆಂಗಳೂರಿನಲ್ಲಿರುವ ಆರ್.ವಿ.ಎಂ. ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಯಿತು. ಹಿತರಕ್ಷಣಾ ವೇದಿಕೆಯ ಸದಸ್ಯ ಸಂದೀಪ್ ಕೇಶವಿನ್ಯಾಸ ಮಾಡಿದರು.