ಮಡಿಕೇರಿ, ಜೂ.23: ನಗರದ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜು ಹಳೆಯ ವಿದ್ಯಾರ್ಥಿಗಳ ಸಂಘದ ನೂತನ ಸಮಿತಿಯನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ಕಾಲೇಜ್‍ನ ನಿವೃತ್ತ ಪ್ರಾಂಶುಪಾಲೆÀ ಡಾ.ಪಾರ್ವತಿ ಅಪ್ಪಯ್ಯ, ಉಪಾಧ್ಯಕ್ಷರಾಗಿ ನಾಟೋಳಂಡ ಚರ್ಮಣ ಹಾಗೂ ಕಾರ್ಯದರ್ಶಿಯಾಗಿ ಬೊಳ್ಳಜಿರ ಬಿ. ಅಯ್ಯಪ್ಪ ಆಯ್ಕೆಯಾಗಿದ್ದಾರೆ.

ನಿರ್ದೇಶಕರುಗಳಾಗಿ ನಂದಿನೆರವಂಡ ಅಯ್ಯಪ್ಪ, ಎ.ಎಸ್.ಬೋಜಮ್ಮ, ಎನ್.ಸಿ.ನೀಲಮ್ಮ, ಕಾವೇರಿ ನಂಜಪ್ಪ, ಬಿ.ಕೆ.ನಂಜಪ್ಪ, ರಾಣಿಮಾಚಯ್ಯ, ಕವಿತಾ ಮುತ್ತಣ್ಣ, ಬಿ.ಕೆ.ಪೂಣಚ್ಚ, ತಾರಾ ಮುದ್ದಯ್ಯ ಹಾಗೂ ಶೋಭಾ ಸುಬ್ಬಯ್ಯ ಅವರುಗಳನ್ನು ಆಯ್ಕೆ ಮಾಡಲಾಯಿತು.

ಸಂಘದ ಈ ಹಿಂದಿನ ಆಡಳಿತ ಮಂಡಳಿ ಉತ್ತಮ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದು, ಅವರ ಮಾರ್ಗದರ್ಶನ ದಲ್ಲಿ ಇನ್ನು ಮುಂದೆಯೂ ಅವುಗಳನ್ನು ಮುಂದುವರೆಸಿಕೊಂಡು ಹೋಗುವದಾಗಿ ನೂತನ ಪದಾಧಿಕಾರಿಗಳು ಭರವಸೆ ನೀಡಿದರು. ಸಂಘದಲ್ಲಿ ಯುವ ಸದಸ್ಯರಿಗೆ ಆದ್ಯತೆ ನೀಡಲು ನಿರ್ಧರಿಸಲಾಯಿತು.