ಮೂರ್ನಾಡು, ಜೂ. 24: ಇಲ್ಲಿಗೆ ಸಮೀಪದ ಮೂರ್ನಾಡುವಿನಲ್ಲಿ ಕೊಡಗು ಜಿಲ್ಲಾ ಪಂಚಾಯಿತಿ ಹಾಗೂ ಕೃಷಿ ಇಲಾಖೆಯ ವತಿಯಿಂದ ಸ್ಥಳೀಯ ಚಾಮುಂಡೇಶ್ವರಿ ಭವನದಲ್ಲಿ ಬೀಜೋಪಚಾರ ಮತ್ತು ಕೀಟನಾಶಕದ ಬಳಕೆ ಎಂಬ ವಿಷಯದ ಬಗ್ಗೆ ಪ್ರಾತ್ಯಕ್ಷತೆಯನ್ನು ನಡೆಸಲಾಯಿತು. ಕೃಷಿ ಇಲಾಖೆಯ ತಜ್ಞ ಡಾ|| ಬಸವಲಿಂಗಯ್ಯ ಅವರು ಈ ಬಗ್ಗೆ ಪ್ರಾತ್ಯಕ್ಷತೆ ಹಾಗೂ ಮಾಹಿತಿಯನ್ನು ನೀಡಿದರು. ಕೃಷಿ ಸಹಾಯಕ ನಿರ್ದೇಶಕ ಶಿವಪ್ರಕಾಶ ಅವರು ರೈತರಿಗೆ ಇಲಾಖೆಯು ಒದಗಿಸುವ ಸೌಲಭ್ಯಗಳನ್ನು ವಿವರಿಸಿದರು. ಪ್ರಗತಿಪರ ಕೃಷಿಕ ಸುಜು ಕರುಂಬಯ್ಯ ಅವರು ತಮ್ಮ ಕೃಷಿ ಅನುಭವಗಳನ್ನು ಹಂಚಿಕೊಂಡರು.

ಗ್ರಾಮ ಪಂಚಾಯಿತಿ ಸದಸ್ಯೆ ಪುದಿಯೊಕ್ಕಡ ಬೆಳ್ಳವ್ವನವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಗೆ ಸಾಹಿತಿ ಕಿಗ್ಗಾಲು ಗಿರೀಶ್ ಮುಖ್ಯ ಅತಿಥಿಗಳಾಗಿದ್ದರು. ಪಡಿಞõÁರಂಡ ವೇಣುಗೋಪಾಲ್ ಸ್ವಾಗತಿಸಿ, ಪುದಿಯೊಕ್ಕಡ ಮಧುಕುಮಾರ್ ವಂದಿಸಿದರು. ಕಾರ್ಯಕ್ರಮವನ್ನು ಪುದಿಯೊಕ್ಕಡ ರಮೇಶ್ ನಿರ್ವಹಿಸಿದರು.