ನಾಪೆÉÇೀಕ್ಲು, ಜೂ. 23: ತಮ್ಮ ವಿದ್ಯಾರ್ಥಿ ದಿಸೆಯಲ್ಲಿಯೇ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವದರಿಂದ ಮುಂದೆ ಉತ್ತಮ ನಾಯಕನಾಗಿ ಬೆಳೆಯಲು ಸಾಧ್ಯ ಎಂದು ಬೆಂಗಳೂರು ಜ್ಯೋತಿ ನಿವಾಸ್ ಕಾಲೇಜಿನ ನಿವೃತ್ತ ಪೆÇ್ರಫೆಸರ್ ಕಾಂಡಂಡ ಉಷಾ ಜೋಯಪ್ಪ ಹೇಳಿದರು.
ಸ್ಥಳೀಯ ನಾಪೆÉÇೀಕ್ಲು ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಿದ್ಯಾರ್ಥಿ ಸಂಘ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿ ಜೀವನ ಅಮೂಲ್ಯವಾದುದು. ವಿದ್ಯಾರ್ಥಿಗಳು ಶಾಲೆ ಆರಂಭದಿಂದಲೇ ನಿರಂತರ ಅಭ್ಯಾಸ ಮಾಡುವದರಿಂದ ಉನ್ನತ ಶ್ರೇಣಿ ಪಡೆಯಲು ಸಾಧ್ಯ ಎಂದು ಕಿವಿ ಮಾತು ಹೇಳಿದರು.
ನಿವೃತ್ತ ಪ್ರಾಂಶುಪಾಲ ಹಾಗೂ ಆಡಳಿತ ಮಂಡಳಿ ನಿರ್ದೇಶಕ ಪೆÇ್ರ. ಕಲ್ಯಾಟಂಡ ಪೂಣಚ್ಚ ಮಾತನಾಡಿ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರ ಪರಿಶ್ರಮದಿಂದ ಗ್ರಾಮೀಣ ಪ್ರದೇಶದ ಈ ವಿದ್ಯಾಸಂಸ್ಥೆಯಲ್ಲಿಯೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕ, ಕ್ರೀಡಾ, ಸಾಂಸ್ಕøತಿಕ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಉತ್ತಮ ಅವಕಾಶಗಳನ್ನು ಕಲ್ಪಿಸಿಕೊಡಲಾಗುತ್ತಿದ್ದು, ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಳ್ಳಬೇಕೆಂದು ಹೇಳಿದರು.
ಶಿಕ್ಷಕ ಕಾಳಯ್ಯ ಪ್ರಮಾಣ ವಚನ ಮಂಡಿಸಿದರು.
ಶಾಲಾ ನಾಯಕಿಯಾಗಿ ತಾನ್ಯ ಅಯ್ಯಪ್ಪ, ಉಪನಾಯಕಿಯಾಗಿ ಶ್ರೇಯಾ ಬೆಳ್ಯಪ್ಪ, ಕಾರ್ಯದರ್ಶಿಯಾಗಿ ದಿಪ್ನ ದೇವಯ್ಯ, ಸಾಂಸ್ಕøತಿಕ ನಾಯಕಿಯಾಗಿ ಯಾನ ದೇಚಮ್ಮ, ಉಪ ನಾಯಕಿಯಾಗಿ ಅನನ್ಯ ಟಿ.ಎಸ್, ಕಾರ್ಯದರ್ಶಿಯಾಗಿ ಸಬೀಬ ಎಂ.ಐ, ಕ್ರೀಡಾ ನಾಯಕನಾಗಿ ಲಿಮನ್ ಕರುಂಬಯ್ಯ ಎಂ.ಎಂ, ಉಪ ನಾಯಕಿಯಾಗಿ ಸನಾ ಪತೀಮ ಕೆ,ಐ, ಕಾರ್ಯದರ್ಶಿಯಾಗಿ ನಿರೂಪ್ ನಾಣಯ್ಯ, ಸ್ವಚ್ಛತಾ ನಾಯಕನಾಗಿ ರಾಕೇಶ್ ಎ.ಪಿ, ಉಪ ನಾಯಕಿಯಾಗಿ ಸಹಲ ಫಾತಿಮ, ಕಾರ್ಯದರ್ಶಿಯಾಗಿ ಸರ್ವನ್ ನಾಚಪ್ಪ ಆಯ್ಕೆಯಾದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಡಾ. ಬೊಪ್ಪಂಡ ಜಾಲಿ ಬೋಪಯ್ಯ ವಹಿಸಿದ್ದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ, ಕಾರ್ಯದರ್ಶಿ ಬಿದ್ದಾಟಂಡ ಪಾಪ ಮುದ್ದಯ್ಯ, ಕಂಗಾಂಡ ಕಾಳಯ್ಯ, ಅಪ್ಪಾರಂಡ ಅಪ್ಪಯ್ಯ, ಇದ್ದರು. ವಿದ್ಯಾರ್ಥಿನಿ ಯಾನಾ ಪ್ರಾರ್ಥನೆ, ಪ್ರಾಂಶುಪಾಲೆ ಕಲ್ಯಾಟಂಡ ಶಾರದ ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿ, ಶಿಕ್ಷಕಿ ಚಂದ್ರಕಲಾ ನಿರೂಪಿಸಿ, ಶಿಕ್ಷಕಿ ಶೋಭಾ ವಂದಿಸಿದರು.