ಕೂಡಿಗೆ, ಜೂ. 24: ಸಮೀಪದ ಸಿದ್ಧಲಿಂಗಪುರ ವ್ಯಾಪ್ತಿಯಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಕೊಟ್ಟಿಗೆಯೊಳಗಿದ್ದ ಆಡಿನ ಮೇಲೆ ಚಿರತೆ ದಾಳಿ ನಡೆಸಿರುವ ಘಟನೆ ನಡೆದಿದೆ.

ಸಿದ್ಧಲಿಂಗಪುರ ಮತ್ತು ಅಳಿಲುಗುಪ್ಪೆ ವ್ಯಾಪ್ತಿಯಲ್ಲಿ ಚಿರತೆ ಓಡಾಡುತ್ತಿದ್ದು, ಜನರು ಭಯಭೀತ ರಾಗಿದ್ದಾರೆ. ಅಳಿಲುಗುಪ್ಪೆಯ ಲೋಕೇಶ್ ಎಂಬವರ ಮನೆಯ ಮುಂದೆ ರಾತ್ರಿ ಕಟ್ಟಿದ್ದ ನಾಯಿಯನ್ನು ಹಾಗೂ ಸಿದ್ಧಲಿಂಗಪುರದ ಕೊಡಗಿನ ಗಡಿಭಾಗದ ಮರಿಯನಗರಕ್ಕೆ ಹೊಂದಿಕೊಂಡಂತಿರುವ ಚಿಮ್ಮಿಯಣ್ಣ ಎಂಬವರ ಕೊಟ್ಟಿಗೆಯಲ್ಲಿ ಕಟ್ಟಿದ್ದ ಆಡನ್ನೂ ತಿಂದು ಹಾಕಿದೆ. ಸಮೀಪದ ಕಾಫಿ ತೋಟವೊಂದರಲ್ಲಿ ಕೆಲಸ ಮುಗಿಸಿ ಕಾಡಿನಂಚಿನಲ್ಲಿ ಕಾರ್ಮಿಕರು ನಡೆದು ಬರುತ್ತಿದ್ದ ಸಂದರ್ಭ ಚಿರತೆಯು ತೋಟದೊಳಗಿನಿಂದ ಕಾಡಿನಂಚಿನಲ್ಲಿ ತೋಡಲಾಗಿದ್ದ ಕಂದಕದೊಳಕ್ಕೆ ಹಾರಿ ಅರಣ್ಯಕ್ಕೆ ತೆರಳಿದೆ. ಚಿರತೆಯನ್ನು ಪ್ರತ್ಯಕ್ಷವಾಗಿ ಕಂಡ ಜನರು ತೋಟಗಳಲ್ಲಿ ಕಾಡಿನಂಚಿನಲ್ಲಿ ಜಮೀನುಗಳಲ್ಲಿ ಕೆಲಸ ನಿರ್ವಹಿಸಲು ಹಾಗೂ ಓಡಾಡಲು ಭಯಪಡುತಿದ್ದಾರೆ.

ಹಾಸನ ಮತ್ತು ಕೊಡಗು ಜಿಲ್ಲೆಯ ಗಡಿಭಾಗವಾಗಿರುವ ಸ್ಥಳದಲ್ಲಿ ಈಗಾಗಲೇ ಹಾಸನ ಜಿಲ್ಲೆಯ ಅರಣ್ಯ ಇಲಾಖೆ ಚಿರತೆ ಹಿಡಿಯಲು ಬೋನ್ ಅನ್ನು ತಂದು ಇರಿಸಿದೆ. ಆದರೂ ಈ ಎರಡು ಜಿಲ್ಲೆಗಳಿಗೆ ಸೇರಿದ ಸ್ಥಳಗಳಲ್ಲಿ ಚಿರತೆ ಓಡಾಡುತ್ತಿದ್ದು, ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಲೇ ಇದೆ. ಕಾಡು ದಾರಿಯಲ್ಲಿ ಜನರು ಅಕ್ಕ ಪಕ್ಕದ ಗ್ರಾಮ ಗಳಿಗೆ ಸಂಚರಿ ಸುವದು ಹೆಚ್ಚಾದ್ದರಿಂದ ಜನರ ಮೇಲು ಚಿರತೆ ದಾಳಿ ನಡೆಸಬಹುದು ಎಂದು ಸಾರ್ವಜನಿಕರು ಆತಂಕದಲ್ಲಿ ದ್ದಾರೆ. ಇದರ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.