ಮಡಿಕೇರಿ, ಜೂ. 23: ಟೆಕ್ವಾಂಡೊ ಫೆಡರೇಷನ್ ಆಫ್ ಇಂಡಿಯಾ ಹಾಗೂ ಕರ್ನಾಟಕ ಟೆಕ್ವಾಂಡೊ ಅಸೋಸಿಯೇಶನ್‍ನ ವತಿಯಿಂದ ಬೆಂಗಳೂರಿನಲ್ಲಿ ನಡೆದ ಬ್ಲ್ಯಾಕ್‍ಬೆಲ್ಟ್ ಪ್ರಮೋಷನ್ ಪರೀಕ್ಷೆಯಲ್ಲಿ ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ಎಂಟು ವಿದ್ಯಾರ್ಥಿಗಳು ಪಾಲ್ಗೊಂಡು ಐದು ಮಂದಿ ಪ್ರಥಮ ಹಾಗೂ ಮೂವರು ದ್ವಿತೀಯ ಡಾನ್ ಬ್ಲಾಕ್ ಬೆಲ್ಟ್ ಮತ್ತು ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದಾರೆ.

ತರಬೇತಿ ಕೇಂದ್ರದ ಬೈಲೆರಾ ಚವಿಕ್ಷಾ ವಿಶ್ವನಾಥ್, ಬೈಲೆರಾ ಪ್ರೊನಿಕ್ಷಾ ವಿಶ್ವನಾಥ್ ಹಾಗೂ ವರುಣ್ ಎನ್. ನಾರಾಯಣ್ ಸೆಕೆಂಡ್ ಡಾನ್ ಬೆಲ್ಟ್ ಪಡೆದುಕೊಂಡಿದ್ದಾರೆ.

ರಾಹುಲ್ ಎಂ. ಚಂದ್ರಶೇಖರ್, ಪ್ರಜ್ಞಾ ವೇಲಾಯುಧನ್, ತೇಜಸ್ ವೇಲಾಯುಧನ್, ಪ್ರೀತಮ್ ಎಂ. ಪದ್ಮನಾಭ, ಸೂಸೆನ್ ಎಂ. ಅನ್ವರ್ ಬಾಷಾ ಫಸ್ಟ್ ಬ್ಲಾಕ್ ಬೆಲ್ಟ್ ಪಡೆದುಕೊಂಡಿದ್ದಾರೆ.

ಇವರು ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ತರಬೇತಿದಾರ ಬಿ.ಜಿ. ಲೋಕೇಶ್ ರೈ ಅವರಲ್ಲಿ ತರಬೇತಿ ಪಡೆದುಕೊಂಡಿದ್ದಾರೆ.