ಮಡಿಕೇರಿ, ಜು. 24: ಹೆಬ್ಬೆಟ್ಟಗೇರಿ ನಿವಾಸಿ ಅಪ್ಪಣ್ಣ ಅಲಿಯಾಸ್ ರಮೇಶ್ (55) ಎಂಬ ವ್ಯಕ್ತಿ ಉರುಳು ಬಳಸಿ ತನ್ನ ತೋಟಕ್ಕೆ ಹೊಂದಿಕೊಂಡಿರುವ ಕಾಡಿನೊಳಗೆ ಕಾಡುಕುರಿ ಕೊಂದು ಹಾಕಿರುವ ಮೇರೆಗೆ ಪೊಲೀಸರು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.ಮಡಿಕೇರಿ ಅರಣ್ಯ ಸಂಚಾರಿ ಪೊಲೀಸ್ ಗುಪ್ತದಳ ಕಾರ್ಯಾಚರಣೆ ನಡೆಸಿ 8 ಕೆ.ಜಿ.ಯಷ್ಟು ಕಾಡುಕುರಿ ಮಾಂಸ, ಚರ್ಮ ಹಾಗೂ ಇತರ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಪೊಲೀಸ್ ಅರಣ್ಯ ಗುಪ್ತ ದಳದ ಸಹಾಯಕ ನಿರೀಕ್ಷಕ ಸುಭಾಷ್, ಸಿಬ್ಬಂದಿಗಳಾದ ಲಿಂಗರಾಜ್, ನಾಣಯ್ಯ, ಧರ್ಮಪ್ಪ, ರಾಜೇಶ್, ಚಾಲಕ ಮೋಹನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.