ಮಡಿಕೇರಿ, ಜೂ. 23: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮಹಿಳಾ ಉದ್ದೇಶಿತ ಅಪ್ರೆಂಟಿಸ್ ತರಬೇತಿಗೆ ಪತ್ರ್ರಿಕೋದ್ಯಮದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದ ಇಬ್ಬರು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಪತ್ರಿಕೋದ್ಯಮ ವಿಷಯದಲ್ಲಿ ಪದವಿ ಅಥವಾ ಸ್ನಾತಕೊತ್ತರ ಪದವಿ ಪಡೆದಿರಬೇಕು. ಕಂಪ್ಯೂಟರ್ ಜ್ಞಾನ ಹಾಗೂ ಕನ್ನಡ ಭಾಷೆ ಬಳಸುವ ಪ್ರಬುದ್ಧತೆ ಇರಬೇಕು. ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಿ ಅವರಿಗೆ ಅಪ್ರೆಂಟಿಸ್ ತರಬೇತಿ ನೀಡುವ ಕಾರ್ಯಕ್ರಮ ಇದಾಗಿದೆ. ಅಪ್ರೆಂಟಿಸ್ ತರಬೇತಿ ಅವಧಿ 9 ತಿಂಗಳಾಗಿದ್ದು ಜುಲೈ 2019 ರಿಂದ ಮಾರ್ಚ್ 2020ರವರೆಗೆ ಇರುತ್ತದೆ. ಮಾಹೆಯಾನ ಪ್ರತಿ ಮಹಿಳಾ ಅಭ್ಯರ್ಥಿಗೆ 15 ಸಾವಿರ ರೂ ಗೌರವಧನ ನೀಡಲಾಗುತ್ತದೆ.