ಸಿದ್ದಾಪುರ, ಜೂ. 22: ವಿದ್ಯಾರ್ಥಿನಿಯನ್ನು ಚುಡಾಯಿಸಿದ ಪುಂಡರಿಗೆ ಗ್ರಾಮಸ್ಥರು ಹಾಗೂ ಪೊಲೀಸರು ಲಾಠಿ ಏಟು ನೀಡಿದ ಘಟನೆ ಪಾಲಿಬೆಟ್ಟದಲ್ಲಿ ನಡೆದಿದೆ.
ಪಾಲಿಬೆಟ್ಟದ ಶಾಲಾ ವಿದ್ಯಾರ್ಥಿನಿಯನ್ನು ಕೇರಳ ಮೂಲದ ಇಬ್ಬರು ಯುವಕರು ಚುಡಾಯಿಸಿದ್ದು, ಇದನ್ನು ಗಮನಿಸಿದ ಸಾರ್ವಜನಿಕರು ಯುವಕರಿಗೆ ಗೂಸ ನೀಡಿ, ಪಾಲಿಬೆಟ್ಟ ಠಾಣೆಗೆ ಒಪ್ಪಿಸಿದ್ದಾರೆ. ಬಳಿಕ ಪೊಲೀಸರು ಕೂಡ ಲಾಠಿ ರುಚಿ ತೋರಿಸಿಕೊಟ್ಟಿದ್ದು, ಯುವಕರ ವಿರುದ್ಧ ಕ್ರಮಕೈಗೊಳ್ಳಲಾಯಿತು.