ಸೋಮವಾರಪೇಟೆ, ಜೂ.22: ಮಂಗಳೂರು ವಿಶ್ವವಿದ್ಯಾಲಯದ ಪದವಿ ಪರೀಕ್ಷಾ ಫಲಿತಾಂಶ ಹೊರಬಿದ್ದಿದ್ದು, ಇಲ್ಲಿನ ಯಡೂರು ಬಿಟಿಸಿಜಿ ಸರ್ಕಾರಿ ಪದವಿ ಕಾಲೇಜಿನ ಅಂತಿಮ ಬಿ.ಎ. ಪದವಿಯಲ್ಲಿ ಶೇ.100 ಫಲಿತಾಂಶ ಲಭಿಸಿದೆ. ಇದರೊಂದಿಗೆ ಅಂತಿಮ ಬಿ.ಕಾಂ. ವಿಭಾಗದಲ್ಲಿ ಶೇ.46 ಫಲಿತಾಂಶ ದೊರೆತಿದೆ ಎಂದು ಪ್ರಾಂಶುಪಾಲ ಶ್ರೀಧರ್ ತಿಳಿಸಿದ್ದಾರೆ.