ಮಡಿಕೇರಿ, ಜೂ. 22: ಸರಕಾರಿ ಪ್ರೌಢಶಾಲೆ ಕಡಗದಾಳು ಇಲ್ಲಿ ನಡೆದ ನೋಟ್ ಪುಸ್ತಕ ವಿತರಣಾ ಸಮಾರಂಭದಲ್ಲಿ ಗ್ರಾಮದ ಗ್ಲ್ಯಾಂಡಲ್ ಎಸ್ಟೇಟ್ ಮಾಲೀಕರಾದ ಲೈಲಾ ಅಲ್ವಾರೀಸ್ ಅವರು ಸ್ಥಳೀಯ ಸರಕಾರಿ ಪ್ರೌಢಶಾಲೆ ಹಾಗೂ ಸರಕಾರಿ ಪ್ರಾಥಮಿಕ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಇತರೆ ಕಲಿಕಾ ಸಾಮಾಗ್ರಿ ಗಳನ್ನು ಉದಾರವಾಗಿ ನೀಡಿದರು.

ಲೈಲಾ ಆಲ್ವಾರೀಸ್ ಇವರು ಕಳೆದ ಹತ್ತು ವರ್ಷಗಳಿಂದ ಕಡಗದಾಳು ಗ್ರಾಮದ ಸರಕಾರಿ ಶಾಲೆಯ ಒಂದನೇ ತರಗತಿಯಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಓದಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ವಿದ್ಯಾರ್ಥಿಗಳು ಜ್ಞಾನಾರ್ಜನೆ ಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವದರ ಮೂಲಕ ತಮ್ಮ ಬದುಕನ್ನು ಉತ್ತಮವಾಗಿ ರೂಪಿಸಿಕೊಳ್ಳುವದರ ಜೊತೆಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಲು ಅವರು ಕರೆ ನೀಡಿದರು.

ಸಮಾರಂಭದಲ್ಲಿ ಲೈಲಾ ಅಲ್ವಾರೀಸ್ ಅವರ ಪುತ್ರ ಕಿರಣ್ ಉಪಸ್ಥಿತರಿದ್ದರು. ಎಸ್.ಡಿ. ಎಂ.ಸಿ.ಯ ಸದಸ್ಯರಾದ ನಾಸಿರ್, ಎರಡೂ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.