ಮಡಿಕೇರಿ, ಜೂ. 21: ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮಡಿಕೇರಿ ಶಾಖೆಯು 5ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಸಂಘದ ಸದಸ್ಯರ ಹಾಗೂ ಗ್ರಾಹಕರ ಸಹಕಾರದಿಂದ ಪ್ರಸ್ತುತ ಸಾಲಿನಲ್ಲಿ 32.05 ಲಕ್ಷ ರೂ. ಲಾಭ ಗಳಿಸುವದ ರೊಂದಿಗೆ 30.73 ಕೋಟಿ ರೂ.ಗೂ ಮಿಕ್ಕಿ ವಾರ್ಷಿಕ ವ್ಯವಹಾರವನ್ನು ನಡೆಸುತ್ತಿದೆ ಎಂದು ಸೊಸೈಟಿಯ ಅಧ್ಯಕ್ಷ ಕೆ.ಸಿ.ನಾರಾಯಣ ಗೌಡ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಡಿಕೇರಿ ಶಾಖೆಯು ಒಟ್ಟು 1112 ಸದಸ್ಯರನ್ನು ಹೊಂದಿದ್ದು, ಇವರಿಂದ 17.70 ಲಕ್ಷ ಪಾಲು ಬಂಡವಾಳ ಸಂಗ್ರಹಿಸಲಾಗಿದೆ. 7.10 ಕೋಟಿ ರೂ.ಗೂ ಮಿಕ್ಕಿ ಠೇವಣಿ ಸಂಗ್ರಹಿಸಿದ್ದು, ಸದಸ್ಯರುಗಳಿಗೆ ರೂ.4.78 ಕೋಟಿಗೂ ಅಧಿಕ ವಿವಿಧ ಸಾಲಗಳನ್ನು ವಿತರಿಸಲಾಗಿದೆ ಎಂದರು.

ಆಕರ್ಷಣೀಯ ಬಡ್ಡಿದರವನ್ನು ನೀಡಿ ಠೇವಣಿಯನ್ನು ಸಂಗ್ರಹಿಸಲಾ ಗುತ್ತಿದೆ. ಸಂಘದ ಪ್ರಧಾನ ಕಚೇರಿಯು ಸುಳ್ಯದಲ್ಲಿದ್ದು, ಒಟ್ಟು 11 ಶಾಖೆಗಳು ಕಾರ್ಯ ನಿರ್ವಹಿಸುತ್ತಿವೆ. ಮುಂದಿನ ಆರ್ಥಿಕ ವರ್ಷದಲ್ಲಿ ಇನ್ನೂ 2 ಶಾಖೆಗಳನ್ನು ಪ್ರಾರಂಭಿಸಲು ಯೋಜನೆಯನ್ನು ರೂಪಿಸಲಾಗಿದೆ ಎಂದು ತಿಳಿಸಿದರು.

ಪ್ರಸ್ತುತ ಚಿನ್ನಾಭರಣ ಸಾಲಗಳಿಗೆ ಕಡಿಮೆ ಬಡ್ಡಿದರ ಶೇ.11 ರಲ್ಲಿ ಶೀಘ್ರ ಸಾಲವನ್ನು ವಿತರಿಸಲಾಗುತ್ತಿದೆ. ಆರ್‍ಟಿಜಿಎಸ್ ಹಾಗೂ ಮಲ್ಟಿಸಿಟಿ ಚೆಕ್ ಸೌಲಭ್ಯ ಸದಸ್ಯರಿಗೆ ನೀಡಲಾಗುತ್ತಿದೆ ಎಂದರು.

ಮಡಿಕೇರಿ ಶಾಖೆಯು ಕಳೆದ ಬಾರಿ ಮೈಸೂರು ವಿಭಾಗದಲ್ಲಿ ಅತೀ ಹೆಚ್ಚು ಇ-ಸ್ಟಾಂಪಿಂಗ್ ವಿತರಿಸಿ ರಾಜ್ಯದಲ್ಲಿ ದ್ವೀತಿಯ ಬಹುಮಾನವನ್ನು ಪಡೆದಿದ್ದು, ಇದು ಸಂಸ್ಥೆಯ ಹಿರಿಮೆಯನ್ನು ಹೆಚ್ಚಿಸಿದೆ ಎಂದು ನಾರಾಯಣಗೌಡ ಹರ್ಷ ವ್ಯಕ್ತಪಡಿಸಿದರು.

ಕಳೆದ ವರ್ಷ ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಹಾನಿಗೊಳಗಾದವರಿಗೆ ಸಂಘದ ವತಿಯಿಂದ ರೂ. 8.53 ಲಕ್ಷ ರೂ.ಗಳ ಆರ್ಥಿಕ ನೆರವನ್ನು ನೀಡಲಾಗಿದೆ. ಒಟ್ಟು 101 ಸಂತ್ರಸ್ತರು ಇದರ ಲಾಭ ಪಡೆದಿದ್ದಾರೆ.

ಜನರಲ್ಲಿ ಉಳಿತಾಯ ಮನೋಭಾವನೆಯನ್ನು ಬೆಳೆಸುವುದು, ಕೃಷಿಕರು, ವ್ಯಾಪಾರಸ್ಥರಿಗೆ ಸಾಲ ಸೌಲಭ್ಯವನ್ನು ಒದಗಿಸುವದು ಮತ್ತು ಆರ್ಥಿಕವಾಗಿ ಹಿಂದುಳಿದವರ ಪ್ರಗತಿಗೆ ನೆರವನ್ನು ನೀಡುವ ಉದ್ದೇಶವನ್ನು ಸಂಸ್ಥೆ ಹೊಂದಿದೆ. ಕಳೆದ ಆರ್ಥಿಕ ವರ್ಷದಲ್ಲಿ ಮಡಿಕೇರಿ ಶಾಖೆಯು ಉತ್ತಮ ವ್ಯವಹಾರವನ್ನು ನಡೆಸಿದೆ ಎಂದು ನಾರಾಯಣ ಗೌಡ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸೊಸೈಟಿಯ ಉಪಾಧ್ಯಕ್ಷ ಪಿ.ಎಸ್.ಗಂಗಾಧರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ್, ಶಾಖಾ ವ್ಯವಸ್ಥಾಪಕÀ ಬಿ.ಅಶೋಕ್, ನಿರ್ದೇಶಕÀ ಚಂದ್ರಾ ಕೋಲ್ಚಾರ್, ಸಲಹಾ ಸಮಿತಿಯ ಅಂಬೇಕಲ್ ನವೀನ್ ಉಪಸ್ಥಿತರಿದ್ದರು.