ಮಡಿಕೇರಿ, ಜೂ. 21 : ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು ಮತ್ತು ರಾಷ್ಟ್ರೀಯ ಕೆಮಿಕಲ್ಸ್ ಮತ್ತು ಪೆÉರ್ಟಿಲೈಸರ್ ಲಿಮಿಟೆಡ್ ಇವರುಗಳ ಸಹಯೋಗದಲ್ಲಿ ತಾ. 22 ರಂದು (ಇಂದು) ಕಾಳುಮೆಣಸು, ಶುಂಠಿ ಮತ್ತು ಏಲಕ್ಕಿ ಬೆಳೆಗಳ ನೂತನ ತಾಂತ್ರಿಕತೆಗಳ ಕುರಿತ ಒಂದು ದಿನದ ಉಚಿತ ಕಾರ್ಯಾಗಾರವನ್ನು ಕೆ.ವಿ.ಕೆ. ಗೋಣಿಕೊಪ್ಪಲುವಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಹೆಚ್ಚಿನ ಮಾಹಿತಿಗೆ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು, ಕೊಡಗು ಜಿಲ್ಲೆ, ದೂರವಾಣಿ 08274-247274ನ್ನು ಸಂಪರ್ಕಿಸಬಹುದು.