ಮೂರ್ನಾಡು: ಮೂರ್ನಾಡು ವಿದ್ಯಾಸಂಸ್ಥೆ ಆವರಣದಲ್ಲಿ ಕೊಡಗು ಅರಣ್ಯ ಇಲಾಖೆ ವತಿಯಿಂದ ವಿವಿಧ ಬಗೆಯ ಗಿಡಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಪಿ.ಎಂ. ದೇವಕಿ, ಪ್ರೌಢಶಾಲೆ ಮುಖ್ಯ ಶಿಕ್ಷಕಿ ಎ.ಎಸ್. ರಶ್ಮಿ, ಶಿಕ್ಷಕರಾದ ಹೆಚ್.ಬಿ. ಕೃಷ್ಣಪ್ಪ, ಎ.ಜಿ. ಗಣೇಶ್, ಎ.ಟಿ. ಗೀತಾ, ವಲಯ ಅರಣ್ಯಾಧಿಕಾರಿಗಳಾದ ವೈ.ಕೆ. ಜಗದೀಶ್, ಆನಂದ ಜಯಗೌಡ, ಮಲ್ಲಯ್ಯ ಹಿರೇಮಠ, ಹೆಚ್.ಪಿ. ಭವ್ಯ, ಅರಣ್ಯ ಸಿಬ್ಬಂದಿ, ಅರಣ್ಯ ರಕ್ಷಕರು, ವಿದ್ಯಾಸಂಸ್ಥೆ ಶಿಕ್ಷಕರು ಹಾಜರಿದ್ದರು.ಸುಂಟಿಕೊಪ್ಪ: ಇಲ್ಲಿಗೆ ಸಮೀಪದ ಬೋಯಿಕೇರಿ ಶ್ರೀಸಿಧ್ದಿ ವಿನಾಯಕ ದೇವಸ್ಥಾನದ ಜಾಗದಲ್ಲಿ ಉಡುಪಿ ಜಿಲ್ಲೆಯ ಸಾಲಿಗ್ರಾಮದ ಸ್ವಾಮಿ ವಿವೇಕಾನಂದರ ದಿವ್ಯ ಲೀಲಾಕ್ಷೇತ್ರದ ಡಿವೈನ್ ಪಾರ್ಕ್ ಅಂಗ ಸಂಸ್ಥೆಯ ವಿವೇಕ ಜಾಗೃತಿ ಬಳಗದ ವತಿಯಿಂದ ಮಾವು, ಹಲಸು, ಸಪೋಟ, ನೆಲ್ಲಿಕಾಯಿ, ನೇರಳೆ, ಸಿಲ್ವರ್ ಇನ್ನಿತರ 35 ಗಿಡಗಳನ್ನು ನೆಡುವದರ ಮೂಲಕ ವನಮಹೋತ್ಸವ ಕಾರ್ಯಕ್ರಮ ಆಚರಿಸಲಾಯಿತು. ನಂತರ ಸ್ಥಳೀಯ ವನಮಹೋತ್ಸವ ಕಾರ್ಯಕ್ರಮದಲ್ಲಿ ಬಳಗದ ಕಾರ್ಯಾಧ್ಯಕ್ಷೆ ಬಿ.ಪಿ. ಜ್ಯೋತಿ ಕುಮಾರಿ, ಉಪಾಧ್ಯಕ್ಷೆ ಲೀಲಾ ಶೇಡ್ತಿ, ಖಜಾಂಚಿ ಗೋಪಾಲ ಕೃಷ್ಣ, ಪದ್ಮವೇಣಿ, ಸದಸ್ಯರುಗಳಾದ ಪುಷ್ಪಾವತಿ, ನಳಿನಿ, ಶ್ರೀಸಿದ್ಧಿ ವಿನಾಯಕ ದೇವಸ್ಥಾನದ ಸ್ವಯಂ ಸೇವಕರಾದ ಪಿ.ಬಿ. ದಿನೇಶ್, ಪಿ.ಬಿ. ಉಮೇಶ್, ಪಿ.ಬಿ. ರಮೇಶ್, ನವೀನ್, ಟಿ.ಕೆ. ಉಮೇಶ್ ಇನ್ನಿತರರು ಹಾಜರಿದ್ದರು.ಕೂಡಿಗೆ: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕೊಡಗು ಜಿಲ್ಲಾ ಕಾವಲುಪಡೆ ವತಿಯಿಂದ ಗಿಡಗಳನ್ನು ಶಾಲಾ ಆವರಣದಲ್ಲಿ ನೆಡಲಾಯಿತು. ಕಾವಲುಪಡೆಯ ಜಿಲ್ಲಾಧ್ಯಕ್ಷ ಎಂ. ಕೃಷ್ಣ, ಮುರುಗೇಶ್, ಶಿವು, ಶಾಲಾ ಮುಖ್ಯ ಶಿಕ್ಷಕಿ ರುಕ್ಮಣಿ ಸೇರಿದಂತೆ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು, ವಿದ್ಯಾರ್ಥಿಗಳು ಇದ್ದರು.