ಗೋಣಿಕೊಪ್ಪಲು, ಜೂ. 21: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಡಿಕೇರಿ, ಜಿಲ್ಲಾಡಳಿತ ಜಿ.ಪಂ. ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು ನಡೆಯಿತು. ತಾಯಿ ಮತ್ತು ಮಕ್ಕಳ ಆರೋಗ್ಯ, ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆ ಮತ್ತು ಸಾಂಕ್ರಾಮಿಕ ರೋಗಗಳ ಬಗ್ಗೆ ಜಾನಪದ ಕಲಾ ಪ್ರದರ್ಶನಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮ ಇತ್ತೀಚೆಗೆ ಮುಕ್ತಾಯಗೊಂಡಿದೆ. ಕೆದಮುಳ್ಳೂರು- ತೋಮರ ಗ್ರಾಮದ ಗೋಪಮ್ಮ ನೇತೃತ್ವದ ಕುಡಿಯರ ಸಾಂಸ್ಕøತಿಕ ಸಂಘ, ಮಡಿಕೇರಿ ತಾಲೂಕಿಗೆ ನಿರ್ಮಲಾ ನೇತೃತ್ವದ ಪೆÇನ್ನಂಪೇಟೆ ಅಂಬೇಡ್ಕರ್ ಕಲಾ ಯುವತಿ ಮಂಡಳಿ ಹಾಗೂ ಸೋಮವಾರಪೇಟೆ ತಾಲೂಕಿಗೆ ಕುಶಾಲನಗರ ರಾಜು ನೇತೃತ್ವದ ಜಿಲ್ಲಾ ವಿದ್ಯಾಸಾಗರ ಕಲಾ ವೇದಿಕೆ ತಂಡಗಳು ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದರು.
ಒಟ್ಟು 10 ಕಾರ್ಯಕ್ರಮಗಳನ್ನು ನೀಡಲಾಗಿದ್ದು, ಮಾದಕ ವಸ್ತು, ಸ್ವಚ್ಛ ಗ್ರಾಮ, ದಂತ ಭಾಗ್ಯದ ಕುರಿತಂತೆ ಬೀದಿ ನಾಟಕವನ್ನೂ ಏರ್ಪಡಿಸಲಾಗಿತ್ತು.