ಗೋಣಿಕೊಪ್ಪ ವರದಿ, ಜೂ. 21: ತಿತಿಮತಿ ಸಮೀಪದ ಮಜ್ಜಿಗೆಹಳ್ಳದಲ್ಲಿ ನಡೆದ ವಾಹನ ಅಪಘಾತದಲ್ಲಿ ವೃದ್ಧೆ ಸಾವನಪ್ಪಿದ್ದಾರೆ.
ಕೈಕೇರಿ ಗ್ರಾಮದ ದಿ. ಪಾಪನೆರ ಜಿ. ಮುತ್ತು ಅವರ ಪತ್ನಿ ಶ್ರೀಮಂಗಲ ಪೊಲೀಸ್ ಠಾಣೆ ಎಎಸ್‍ಐ ಸಾಬು ಅವರ ತಾಯಿ ಪಾಪನೆರ ಎಂ. ಪಾರ್ವತಿ (86) ಅಪಘಾತದಲ್ಲಿ ಮೃತರಾದವರು.
ಅನಾರೋಗ್ಯದಿಂದ ಬಳಲುತ್ತಿದ್ದ ಪಾರ್ವತಿ ಅವರನ್ನು ಮೈಸೂರು ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿ ಮನೆಗೆ ಹಿಂತಿರುಗುವಾಗ ವೃದ್ಧೆ ಪ್ರಯಾಣಿಸುತ್ತಿದ್ದ ಮಾರುತಿ ವಾಹನ ರಸ್ತೆ ಬದಿಯ ಚರಂಡಿಗೆ ಜಾರಿದೆ. ಪರಿಣಾಮ ಪಾರ್ವತಿ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಚಾಲನೆ ಮಾಡುತ್ತಿದ್ದ ಸಾಬು (55) ಅಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.