ಗೋಣಿಕೊಪ್ಪ ವರದಿ, ಜೂ. 21: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜನೆಗೊಂಡಿದ್ದ ರಕ್ಷಾ ಸಮಿತಿ ಮಾಸಿಕ ಸಭೆ ಕೋರಂ ಇಲ್ಲದ ಹಿನ್ನೆಲೆ ರದ್ದುಗೊಂಡಿತು.

ರಕ್ಷಾ ಸಮಿತಿಯ 21 ಸದಸ್ಯರಲ್ಲಿ 4 ಸದಸ್ಯರು ಮಾತ್ರ ಹಾಜರಾದ ಕಾರಣ ಸಭೆ ಮುಂದುವರೆಯಲಿಲ್ಲ. ಸದಸ್ಯರ ಗೈರು ಹಾಜರಿಗೆ ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಗೈರು ಹಾಜರಾದ ಸದಸ್ಯರಿಗೆ ನೋಟಿಸ್ ಜಾರಿಗೊಳಿಸುವಂತೆ ರಕ್ಷಾ ಸಮಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್ ಅವರನ್ನು ಬೋಪಣ್ಣ ಒತ್ತಾಯಿಸಿದರು.

ಸಮುದಾಯ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿ ಡಾ. ಗಣೇಶ್‍ಕುಮಾರ್, ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್, ಗ್ರಾ.ಪಂ. ಅಧ್ಯಕ್ಷೆ ಸೆಲ್ವಿ, ಜಿ.ಪಂ. ಸದಸ್ಯೆ ಶ್ರೀಜಾ ಶಾಜಿ ಇದ್ದರು.