ಸೋಮವಾರಪೇಟೆ, ಜೂ. 21: ಇಲ್ಲಿನ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಬೇರೆಡೆಗೆ ವರ್ಗಾವಣೆಗೊಂಡ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಠಾಣೆಯ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.

ಇಲ್ಲಿನ ಪತ್ರಿಕಾಭವನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ, ಸೋಮವಾರ ಪೇಟೆ ಠಾಣೆಯಿಂದ ವರ್ಗಾವಣೆ ಗೊಂಡ ಅಪರಾಧ ವಿಭಾಗದ ಪಿ.ಎಸ್.ಐ. ಮಂಚಯ್ಯ, ಸಿಬ್ಬಂದಿ ಗಳಾದ ಮಹೇಂದ್ರ, ಸಂದೇಶ್, ಅಪ್ಸಾನ ಹಾಗೂ ಉಷಾ ಅವರು ಗಳಿಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ಪೊಲೀಸರು ಸಮಯಪ್ರಜ್ಞೆ, ಕಾರ್ಯ ದಕ್ಷತೆ, ಕರ್ತವ್ಯ ನಿಷ್ಠೆಯಿಂದ ಕೆಲಸ ಮಾಡಬೇಕು.

ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಮತ್ತು ಸೌಜನ್ಯದಿಂದ ವರ್ತಿಸಿದಲ್ಲಿ ಯಾವದೇ ಸ್ಥಳದಲ್ಲಾದರೂ ಕೆಲಸ ಮಾಡಲು ಸಾಧ್ಯ. ಪೊಲೀಸರು ಸದಾ ಜಾಗೃತರಾಗಿರಬೇಕು ಎಂದರು.

ಠಾಣಾಧಿಕಾರಿ ಶಿವಶಂಕರ್ ಮಾತನಾಡಿ, ಸರಕಾರಿ ನೌಕರರಿಗೆ ಪದೋನ್ನತಿ ಹಾಗೂ ವರ್ಗಾವಣೆ ಸರ್ವೆಸಾಮಾನ್ಯ. ಕೆಲಸದಲ್ಲಿ ಸಾಧನೆಗೈಯಲು ಬೇರಾವದೇ ಇಲಾಖೆಯಲ್ಲಿ ಸಿಗದ ಅವಕಾಶ ಪೊಲೀಸ್ ಇಲಾಖೆಯಲ್ಲಿ ಸಿಗುತ್ತದೆ. ತಮ್ಮ ಸಾಮಥ್ರ್ಯವನ್ನು ಪ್ರದರ್ಶಿಸಲು ಉತ್ತಮ ಅವಕಾಶವಿದ್ದು, ಎಲ್ಲರೂ ಅದನ್ನು ಸದುಪಯೋಗಪಡಿಸಿ ಕೊಳ್ಳಬೇಕು. ಉತ್ತಮ ಸಿಬ್ಬಂದಿ ಗಳಿದ್ದರೆ ಮಾತ್ರ ಠಾಣಾ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿ ಗೊಳಿಸಬಹುದು ಎಂದರು.

ವೇದಿಕೆಯಲ್ಲಿ ಪ್ರೊಬೇಷನರಿ ಪಿಎಸ್‍ಐ ಮೋಹನ್‍ರಾಜ್, ಎಎಸ್‍ಐ ಸುಂದರ್ ಸುವರ್ಣ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್, ನಾರಾಯಣಗುರು ಸೇವಾ ಸಮಿತಿ ಅಧ್ಯಕ್ಷ ಬಿ.ಎ. ಭಾಸ್ಕರ ಉಪಸ್ಥಿತರಿದ್ದರು.