ಮಡಿಕೇರಿ, ಜೂ. 21: ಸರ್ಕಾರವು ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು 2019-20 ನೇ ಸಾಲಿಗೆ ಸೀವಿಂಗ್ ಮಷೀನ್ ಆಪರೇಟರ್ (ಯಾಂತ್ರೀಕೃತ ಹೊಲಿಗೆ ತರಬೇತಿ) ಹಾಗೂ ಕೈಮಗ್ಗ ಹಾಗೂ ವಿದ್ಯುತ್ ಮಗ್ಗ ತರಬೇತಿ ಹಮ್ಮಿಕೊಂಡಿದ್ದು, ಸೀವಿಂಗ್ ಮಷೀನ್ ಆಪರೇಟರ್ ತರಬೇತಿಗಳನ್ನು ಮಡಿಕೇರಿ, ಮೂರ್ನಾಡು, ಕುಶಾಲನಗರ, ಶನಿವಾರಸಂತೆ, ಸೋಮವಾರಪೇಟೆ, ಗೋಣಿಕೊಪ್ಪ ಹಾಗೂ ವೀರಾಜಪೇಟೆಯಲ್ಲಿರುವ ಇಲಾಖೆಯಿಂದ ಅನುಮೋದನೆಗೊಂಡಿರುವ ತರಬೇತಿ ಕೇಂದ್ರಗಳಲ್ಲಿ ಹಾಗೂ ಕೈಮಗ್ಗ ತರಬೇತಿಯನ್ನು ಕುಶಾಲನಗರ ತರಬೇತಿ ಕೇಂದ್ರದಲ್ಲಿ, ವಿದ್ಯುತ್ ಮಗ್ಗ ತರಬೇತಿಯನ್ನು ಪೊನ್ನಂಪೇಟೆಯ ಕೇಂದ್ರದಲ್ಲಿ ಪಡೆಯಬಹುದಾಗಿದೆ. ತರಬೇತಿ ಪಡೆಯಲಿಚ್ಚಿಸುವ ಜಿಲ್ಲೆಯ ನಿರುದ್ಯೋಗಿ ಯುವಕ ಮತ್ತು ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.

ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯಡಿ ವಾಹಿನಿ-2ರಡಿ ಕೈಮಗ್ಗ ಮತ್ತು ಜವಳಿ ಇಲಾಖೆಯನ್ನು ಸೇರಿಸಲಾಗಿದ್ದು, ಎಲ್ಲಾ ಅನುಷ್ಠಾನಾಧಿಕಾರಿಗಳು ತಿತಿತಿ.ಞಚಿushಚಿಟಞಚಿಡಿ.ಛಿom ನಲ್ಲಿ ನೋಂದಣಿ ಮಾಡಿಕೊಂಡ ಅಭ್ಯರ್ಥಿಗಳಿಗೆ ಮಾತ್ರ ತರಬೇತಿ ನೀಡಲಾಗುವದು. ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ದ್ವಿಪ್ರತಿಯಲ್ಲಿ ಸಲ್ಲಿಸಬೇಕು, ಸೀವಿಂಗ್ ಮಷೀನ್ ಆಪರೇಟರ್ ಮತ್ತು ಕೈಮಗ್ಗ ತರಬೇತಿಯು 45 ದಿನಗಳ ಅವಧಿಯಾಗಿರುತ್ತದೆ. ತರಬೇತಿ ಪಡೆಯಲು ಅಭ್ಯರ್ಥಿಗಳು ಕನಿಷ್ಟ 5ನೇ ತರಗತಿ ಉತ್ತೀರ್ಣರಾಗಿರಬೇಕು, ಅಭ್ಯರ್ಥಿಯ ವಯಸ್ಸು 18 ರಿಂದ 35 ವರ್ಷ ಒಳಪಟ್ಟಿರಬೇಕು ಹಾಗೂ ಸೂಕ್ತ ದಾಖಲೆಗಳನ್ನು ಒದಗಿಸಬೇಕು.

ಅರ್ಜಿಯನ್ನು ಕಚೇರಿ ವೇಳೆಯಲ್ಲಿ ಸಹಾಯಕ ನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಕಟ್ಟಡ, ಕೊಹಿನೂರ್ ರಸ್ತೆ, ಮಡಿಕೇರಿ, ದೂ. 08272-220365 ಇಲ್ಲಿಂದ ಪಡೆಯಬಹುದು. ಅರ್ಜಿ ಸಲ್ಲಿಸಲು ತಾ. 30 ಕೊನೆಯ ದಿನವಾಗಿದೆ.