ಮಡಿಕೇರಿ, ಜೂ. 21: ಹಾಕಿ ಕರ್ನಾಟಕ ವತಿಯಿಂದ ಏರ್ಪಡಿಸಲಾಗಿರುವ 5ನೇ ಹಾಕಿ ಕರ್ನಾಟಕ ಲೀಗ್ ಚಾಂಪಿಯನ್ಶಿಪ್ ಪಂದ್ಯಾವಳಿಯು ತಾ. 22 ರಿಂದ ಜುಲೈ 2ರವರೆಗೆ ಬೆಂಗಳೂರಿನ ಫೀ.ಮಾ. ಕಾರ್ಯಪ್ಪ ಹಾಕಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯಾವಳಿಯು ಕೆನರಾ ಬ್ಯಾಂಕ್, ಸಾಯಿ, ಯುವಜನ ಸೇವಾ ಇಲಾಖೆ, ಕಸ್ಟಮ್ಸ್ ಅಂಡ್ ಎಕ್ಸೈಸ್, ರೈಲ್ ವ್ಹೀಲ್ ಪ್ಯಾಕ್ಟರಿ ಹಾಗೂ ಪೋಸ್ಟಲ್ ತಂಡಗಳು ಪಾಲ್ಗೊಳ್ಳಲಿವೆ.