ಮಡಿಕೇರಿ, ಜೂ. 20: ಗೋಣಿಕೊಪ್ಪಲು ಅರುವತೊಕ್ಲುವಿನ ಸರ್ವದೈವತಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕದ ಉದ್ಘಾಟನೆ ನೆರವೇರಿತು.

ಮುಖ್ಯ ಅತಿಥಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಕೌಟ್ಸ್ ಮತ್ತು ಗೈಡ್ಸ್‍ನ ಕಾಳಪ್ಪ ಮಾತಾನಾಡಿ ಸ್ಕೌಟ್ಸ್ ಮತ್ತು ಗೈಡ್ಸ್‍ನ ಕುರಿತಾಗಿ ವಿವರವಾಗಿ ತಿಳಿಸಿದರು. ಇದರಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ದೇಶ ರಕ್ಷಣೆಗೆ ತಮ್ಮಿಂದಾಗುವ ಸಹಾಯ ಮಾಡಲು ಮುಂದಾಗಬೇಕು ಎಂದು ಹೇಳಿದರು.

ಅತಿಥಿಗಳಾಗಿದ್ದ ತಾಲೂಕು ಸ್ಕೌಟ್ಸ್ ಮತ್ತು ಗೈಡ್ಸ್ ಅಧಿಕಾರಿ ಹಾಗೂ ತರಬೇತುದಾರರಾದ ಜಾಜಿ ಅವರು ವಿದ್ಯಾರ್ಥಿಗಳಿಗೆ ದೀಕ್ಷೆಯನ್ನು ಬೋಧಿಸಿದರು.

ಶಾಲಾ ಆಡಳಿತ ಮಂಡಳಿಯ ಅಧÀ್ಯಕ್ಷ ಪ್ರಕಾಶ್ ಮೊಣ್ಣಪ್ಪ ಮಾತನಾಡಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ನಕ್ಷತ್ರಗಳಾಗಬೇಕು ಎಂದು ಶುಭ ಕೋರಿದರು.

ನಂತರ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರು ಸೇರಿ ಸ್ಕಾರ್ಪ್ ಕ್ಯಾಪ್ ಹಾಗೂ ಸಿಹಿಯನ್ನು ವಿತರಿಸಿದರು.

ಪ್ರಾಂಶುಪಾಲೆ ಲಲಿತ ಮೊಣ್ಣಪ್ಪ, ಮುಖ್ಯ ಶಿಕ್ಷಕ ಶ್ರೀಮಾನ್ ಪ್ರದೀಪ್, ಶೀಲಾ ಬೋಪಣ್ಣ ಮತ್ತು ಸ್ಕೌಟ್ಸ್ ಮಾಸ್ಟರ್ ರವಿಚಂದ್ರನ್ ಭಾಗವಹಿಸಿದ್ದರು. ರಮ್ಯ ನಿರೂಪಿಸಿ, ಮೋನಿಕಾ ಸ್ವಾಗತಿಸಿದರೆ, ಧರಣಿ ವಂದನಾರ್ಪಣೆಯನ್ನು ನೆರವೇರಿಸಿದರು.