ಶನಿವಾರಸಂತೆ, ಜೂ. 20: 16,200 ಕೆ.ಜಿ.ಗಿಂತ ಹೆಚ್ಚಿನ ಭಾರವುಳ್ಳ ಮರಳು ಸರಕು ಸಾಗಾಣೆ ಮಾಡುವ ವಾಹನಗಳಿಗೆ ಕೊಡಗು ಜಿಲ್ಲಾಧಿಕಾರಿ ತಾ. 12 ರಿಂದ ಆಗಸ್ಟ್ 8 ರವರೆಗೆ ಕೊಡಗು ಜಿಲ್ಲೆಯಾದ್ಯಂತ ನಿರ್ಬಂಧ ವಿಧಿಸಿ ಆದೇಶ ಜಾರಿ ಮಾಡಿದ್ದರೂ ಕೂಡ ಕಲ್ಲಿದ್ದಲು ತುಂಬಿಸಿಕೊಂಡು ಮಂಗಳೂರಿನಿಂದ ಕುಶಾಲನಗರಕ್ಕೆ ಕೊಡ್ಲಿಪೇಟೆ-ಶನಿವಾರಸಂತೆ ಮಾರ್ಗವಾಗಿ ಬರುತ್ತಿದ್ದ 12 ಚಕ್ರದ ಲಾರಿ (ಕೆಎ-19-ಎಬಿ-3220) ಶನಿವಾರಸಂತೆ ಪೊಲೀಸರು, ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾನೂನಿನಂತೆ ರೂ. 26,400 ದಂಡ ವಿಧಿಸಿದ್ದಾರೆ.