ಮಡಿಕೇರಿ, ಜೂ. 20: ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆಯ ಸಂದರ್ಭ ತುರ್ತು ಸೇವೆ ಚೆಸ್ಕಾಂ ಇಲಾಖೆಯಿಂದ ಎಲ್ಲಾ ಮುನ್ನೆಚ್ಚರಿಕೆ ಯೊಂದಿಗೆ, ಸುರಕ್ಷಾ ಕ್ರಮಕ್ಕೆ ಸನ್ನದ್ಧವಾಗಿರುವದಾಗಿ ಚೆಸ್ಕಾಂ ಕಾರ್ಯಪಾಲಕ ಅಭಿಯಂತರ ಸೋಮಶೇಖರ್ ಭರವಸೆ ನೀಡಿದರು. ಇಲ್ಲಿನ ಮಡಿಕೇರಿ ಉಪ ವಿಭಾಗದ ಕಚೇರಿಯಲ್ಲಿ ಸಾರ್ವಜನಿಕ ಮಡಿಕೇರಿ, ಜೂ. 20: ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆಯ ಸಂದರ್ಭ ತುರ್ತು ಸೇವೆ ಚೆಸ್ಕಾಂ ಇಲಾಖೆಯಿಂದ ಎಲ್ಲಾ ಮುನ್ನೆಚ್ಚರಿಕೆ ಯೊಂದಿಗೆ, ಸುರಕ್ಷಾ ಕ್ರಮಕ್ಕೆ ಸನ್ನದ್ಧವಾಗಿರುವದಾಗಿ ಚೆಸ್ಕಾಂ ಕಾರ್ಯಪಾಲಕ ಅಭಿಯಂತರ ಸೋಮಶೇಖರ್ ಭರವಸೆ ನೀಡಿದರು. ಇಲ್ಲಿನ ಮಡಿಕೇರಿ ಉಪ ವಿಭಾಗದ ಕಚೇರಿಯಲ್ಲಿ ಸಾರ್ವಜನಿಕ ಉಂಟಾಗದಂತೆ ಕಾಳಜಿ ವಹಿಸ ಬೇಕೆಂದು ಸಲಹೆಯಿತ್ತರು. ಜಿಲ್ಲೆಯಲ್ಲಿ 350 ಮಂದಿ ಮಾರ್ಗ ನೌಕರರಿದ್ದು, ಪ್ರಸಕ್ತ ಹೆಚ್ಚುವರಿ 150 ಸಿಬ್ಬಂದಿ ಯೊಂದಿಗೆ ಎಲ್ಲಾ ಮೂರು ತಾಲೂಕುಗಳಿಗೆ ಅಲ್ಲಲ್ಲಿ ತಂಡಗಳಲ್ಲಿ ಕೆಲಸ ನಿರ್ವಹಿಸಲು ಕ್ರಮ ವಹಿಸಲಾಗಿದೆ ಎಂದು ನೆನಪಿಸಿದರು.
ಮಡಿಕೇರಿ ತಾಲೂಕಿನ ಬೆಟ್ಟಗೇರಿ, ನಾಪೋಕ್ಲು,
(ಮೊದಲ ಪುಟದಿಂದ) ಪಾಲೂರು, ಹಾಕತ್ತೂರು, ಮೂರ್ನಾಡು ಮತ್ತಿತರ ಕಡೆಗಳಿಂದ ಆಗಮಿಸಿದ್ದ ವಿದ್ಯುತ್ ಗ್ರಾಹಕರು ಅಧಿಕಾರಿಗಳ ಬಳಿ ಸಮಸ್ಯೆಗಳ ಕುರಿತು ಗಮನ ಸೆಳೆದರು. ಆ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ವಹಿಸಲಾಗುವದು ಎಂದು ಆಶ್ವಾಸನೆ ನೀಡಲಾಯಿತು. ವಿದ್ಯುತ್ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಸೇರಿದಂತೆ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಸಂಪತ್‍ಕುಮಾರ್, ಲೆಕ್ಕಾಧಿಕಾರಿ ದೇವಯ್ಯ ಸೇರಿದಂತೆ ಸಾರ್ವಜನಿಕ ಕುಂದುಕೊರತೆ ಬಗ್ಗೆ ಸ್ಥಳದಲ್ಲೇ ಮಾಹಿತಿಯೊಂದಿಗೆ ಅಗತ್ಯ ಕ್ರಮದ ಭರವಸೆ ನೀಡಿದರು.