ಮಡಿಕೇರಿ, ಜೂ. 20: ಅನಧಿಕೃತವಾಗಿ ತೋಟವೊಂದರಲ್ಲಿ ಕಡಿದು ಸಂಗ್ರಹಿಸಿದ್ದ ರೂ. 3 ಲಕ್ಷ ಮೌಲ್ಯದ ಬೀಟಿಮರವನ್ನು ಮಡಿಕೇರಿ ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ.
ಹೊಸ್ಕೇರಿ ಗ್ರಾಮದ ಬಲ್ಲಚಂಡ ದಿಲೀಪ್ ಗಣಪತಿ ಎಂಬವರ ತೋಟದಲ್ಲಿ ಈ ಪ್ರಕರಣ ಪತ್ತೆಯಾಗಿದೆ. ತೋಟ ಮಾಲೀಕರ ಮೇಲೆ ಪ್ರಕರಣ ದಾಖಲಾಗಿದ್ದು, ಅವರು ನಾಪತ್ತೆಯಾಗಿರುವದಾಗಿ ಇಲಾಖಾ ಮೂಲಗಳು ತಿಳಿಸಿವೆ.
ಬೀಟಿಮರವನ್ನು 19 ನಾಟಾಗಳಾಗಿ ಪರಿವರ್ತಿಸಿ ಸಂಗ್ರಹಿಸಿಡಲಾಗಿತ್ತು ಎಂದು ತಿಳಿದು ಬಂದಿದೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮಡಿಕೇರಿ ಪೊಲೀಸ್ ಅರಣ್ಯ ಸಂಚಾರಿದಳ ಕಾರ್ಯಾಚರಣೆ ನಡೆಸಿದೆ.