ಮಡಿಕೇರಿ, ಜೂ. 20: ಮಡಿಕೇರಿ ಅರಣ್ಯ ವಲಯದ ಇಲಾಖಾ ಸಸ್ಯ ಕ್ಷೇತ್ರದಲ್ಲಿ ಆರ್‍ಎಸ್‍ಪಿಡಿ ಯೋಜನೆಯಡಿ ಸಿಲ್ವರ್, ಬಳಂಜಿ, ಹೆಬ್ಬೇವು, ಬಿದಿರು ಗಿಡಗಳನ್ನು ಬೆಳೆಸಲಾಗಿದ್ದು, ಮಡಿಕೇರಿ ತಾಲೂಕಿನ ವ್ಯಾಪ್ತಿಯ ರೈತರು ಅರ್ಜಿಯೊಂದಿಗೆ ಆರ್‍ಟಿಸಿ.ಯನ್ನು ಮಡಿಕೇರಿ ವಲಯ ಕಚೇರಿಗೆ ಕಚೇರಿ ವೇಳೆಯಲ್ಲಿ ಸಲ್ಲಿಸಿ ಸಸಿಗಳನ್ನು ಸಸ್ಯ ಕ್ಷೇತ್ರದಿಂದ (ನರ್ಸರಿ) ಪಡೆದುಕೊಳ್ಳಬಹುದು ಎಂದು ಮಡಿಕೇರಿ ವಲಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.