ಮಡಿಕೇರಿ, ಜೂ. 20: ಕೊಡವರಿಗೆ ಭೂ ಹಕ್ಕು ಸ್ವಾಯತ್ತತೆ, ಜನಾಂಗಕ್ಕೆ ಬುಡಕಟ್ಟು ಕುಲ ಹಕ್ಕಿನೊಂದಿಗೆ ರಾಜ್ಯಾಂಗ ಭದ್ರತೆ, ಕೊಡವ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರಿಸುವದು ಸೇರಿದಂತೆ ಈ ಪ್ರಮುಖ ಬೇಡಿಕೆಗಳ ಈಡೇರಿಕೆಗೊಳಿಸುವಂತೆ ಸಿ.ಎನ್.ಸಿ. ಕೇಂದ್ರ ಸರಕಾರವನ್ನು ಆಗ್ರಹಿಸಿದೆ.
ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರುಗಳಿಗೆ ಪತ್ರ ಬರೆದು ಬೇಡಿಕೆಗಳನ್ನು ಮುಂದಿರಿಸಿರುವ ಸಿ.ಎನ್.ಸಿ. ಅಧ್ಯಕ್ಷ ಎನ್.ಯು. ನಾಚಪ್ಪ, ತಮ್ಮ ಹಕ್ಕೊತ್ತಾಯ ಈಡೇರಿಸಲು ಒತ್ತಾಯಿಸಿ ಬರುವ ನವೆಂಬರ್ 1 ರಂದು ದೇಶದ ರಾಜಧಾನಿ ನವದೆಹಲಿಯ ಸಂಸತ್ ಭವನ ಬಳಿ ಧರಣಿ ಹಮ್ಮಿಕೊಳ್ಳಲಾಗುವದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.