ಭಾಗಮಂಡಲ, ಜೂ. 20: ಭಾರತ ಸರಕಾರದ ಖಾದಿ ಗ್ರಾಮೋದ್ಯೋಗ ಆಯೋಗದ ಮೇಜರ್ ಹನಿಮಿಷನ್ ಯೋಜನೆಯಡಿಯಲ್ಲಿ ಕೊಡಗು ಜಿಲ್ಲಾಮಟ್ಟದ ಜೇನು ಕೃಷಿಕರ ಸಮಾವೇಶವು ಇಂದು ಭಾಗಮಂಡಲ ಗೌಡಸಮಾಜದಲ್ಲಿ ನಡೆಯಿತು.

ಖಾದಿ ಗ್ರಾಮೋದ್ಯೋಗ ಆಯೋಗದ ಬೆಂಗಳೂರಿನ ಮೋಸಸ್ ಸಿಂಗ್ ಇದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಡಾಕ್ಟರ್ ಕೆಂಚ ರೆಡ್ಡಿ ನೆರವೇರಿಸಿ ಜೇನು ಕುಟುಂಬಗಳಿಗೆ ರೋಗಗಳ ಬಗ್ಗೆ ಮತ್ತು ಅದರ ನಿಯಂತ್ರಣ ಹೇಗೆ ಎಂಬದನ್ನು ಕೃಷಿಕರಿಗೆ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿ ಕೆ. ವೀರಪ್ಪಗೌಡ ಮಾತನಾಡುತ್ತ ಜೇನು ಕುಟುಂಬಗಳ ವಿಂಗಡಣೆ ಬಗ್ಗೆ ಮತ್ತು ಮಳೆಗಾಲದಲ್ಲಿ ಜೇನು ಕುಟುಂಬಗಳ ರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು. ಸಮಾವೇಶದ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್ ಮಾತನಾಡುತ್ತಾ, ಭಾರತ ಸರ್ಕಾರದ ವತಿಯಿಂದ ಇಂತಹ ಕಾರ್ಯಕ್ರಮಗಳು ಸಹಕಾರ ಸಂಘಗಳ ಮೂಲಕ ಹಮ್ಮಿಕೊಂಡರೆ ಜೇನು ಕೃಷಿಕರಿಗೆ ಪ್ರಯೋಜನಕಾರಿಯಾಗಲಿದೆ ಎಂದು, ಜೇನುಕೃಷಿಗೆ ಸಂಘದಿಂದ ದೊರಕುವ ಸವಲತ್ತುಗಳ ಮಾಹಿತಿ ನೀಡಿದರು. ಪಿ.ಡಿ. ವಸಂತ್ ತೋಟಗಾರಿಕೆ ಇಲಾಖೆ ಯಿಂದ ಜೇನು ಕೃಷಿಕರಿಗೆ ದೊರಕುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರ. ಸಂಘದ ಉಪಾಧ್ಯಕ್ಷÀ ವಿಜಯಕುಮಾರ್ ಪ್ರಾರ್ಥಿಸಿದರೆ, ಕಾರ್ಯದರ್ಶಿ ಅಶೋಕ್ ಸ್ವಾಗತಿಸಿ, ಪೊಡನೊಳನ ಸಿ. ವಿಠಲ ವಂದಿಸಿದರು.