ಮಡಿಕೇರಿ, ಜೂ. 20: ವೀರಾಜಪೇಟೆ ಸರ್ವೋದಯ ಕಾಲೇಜ್ ಆಫ್ ಎಜುಕೇಶನ್‍ನಲ್ಲಿ ಕಮ್ಯುನಿಕೇಟಿವ್ ಇಂಗ್ಲೀಷ್ ಕೋರ್ಸ್ ಅನ್ನು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಎನ್.ಕೆ. ಜ್ಯೋತಿ ಉದ್ಘಾಟಿಸಿದರು.

ಇಂದು ಇಂಗ್ಲೀಷ್ ಅನಿವಾರ್ಯತೆಯನ್ನು ಹಾಗೂ ಮಹತ್ವವನ್ನು ಅವರು ವಿವರಿಸಿದರು. ಈ ಕೋರ್ಸ್‍ನ ಸಂಪನ್ಮೂಲ ವ್ಯಕ್ತಿ ಹಾಗೂ ಟ್ರೈನರ್ ಸುಮಾಚಿತ್ರಭಾನು ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷೆ ಸೂರ್ಯಕುಮಾರಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲೆ ಎಂ. ವಾಣಿ ಇಂದಿನ ಸಮಾಜದಲ್ಲಿ ಯಾವದೇ ಆಂಗ್ಲ ಮಾದರಿ ಶಾಲೆಗಳಲ್ಲಿ ಪಾಠ ಮಾಡಲು ಪ್ರಶಿಕ್ಷಣಾರ್ಥಿಗಳನ್ನು ಇಂಗ್ಲೀಷ್ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುವ ಹಾಗೂ ವ್ಯವಹರಿಸುವ ಕೌಶಲ್ಯ ಬೆಳೆಸುವದೇ ಈ ಕೋರ್ಸ್‍ನ ಮೂಲ ಗುರಿ ಎಂದು ವಿವರಿಸಿದರು. ಈ ಕೋರ್ಸ್‍ನ ಸಂಯೋಜಕರಾದ ಮಿನಿ ಕೆ.ಜೆ. ಸ್ವಾಗತಿಸಿದರು.