ಮಡಿಕೇರಿ, ಜೂ. 20: ಕಳೆದ ಏಪ್ರಿಲ್ 11 ರಂದು ಕೆಲಸಕ್ಕೆ ಎಂದು ಮನೆಯಿಂದ ತೆರಳಿರುವ ತನ್ನ ಪತ್ನಿ ಶ್ವೇತಾ ಎಂಬಾಕೆ ಇದುವರೆಗೆ ಹಿಂತಿರುಗಿ ಬಂದಿಲ್ಲವೆಂದು, ಆಕೆಯ ಪತಿ ಉಮೇಶ್ ವೀರಾಜಪೇಟೆ ನಗರ ಠಾಣೆಗೆ ದೂರು ಸಲ್ಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಕೆಯ ಸುಳಿವು ಸಿಕ್ಕವರು ಪೊಲೀಸ್ ಠಾಣೆ ಸಂಖ್ಯೆ: 08274-257333 ಗೆ ಸಂಪರ್ಕಿಸಲು ತಿಳಿಸಲಾಗಿದೆ.