ಮಡಿಕೇರಿ, ಜೂ. 20: ಯಾರೂ ಊಹಿಸದ ಮಾದರಿಯಲ್ಲಿ ಭಾರೀ ಬೆಲೆ ಏರಿಕೆ ಕಂಡು ಬಂದಿದೆ. ಆದರೆ ಬೆಳೆ ಇಲ್ಲ...! ಒಂದೊಮ್ಮೆ ಸಂಬಾರ ರಾಣಿ ಖ್ಯಾತಿಯ ಏಲಕ್ಕಿ ಫಸಲಿನಿಂದಲೇ ಬದುಕು ಕಂಡುಕೊಳ್ಳುತ್ತಿದ್ದ ಬೆಳೆಗಾರರ ಪರಿಸ್ಥಿತಿ ಇದಾಗಿದ್ದು, ಈ ಸಂಬಾರ ರಾಣಿ ಇದೀಗ ಕೈಗೆಟುಕದ ದ್ರಾಕ್ಷಿ ಎಂಬ ಗಾದೆಗೆ ಪೂರಕವಾದಂತಹ ಸನ್ನಿವೇಶ ಎದುರಾಗಿದ್ದು, ಬೆಳೆಗಾರರು ಕೈ ಕೈ ಹಿಸುಕಿಕೊಳ್ಳುವಂತಾಗಿದೆ.ಕಳೆದ ಒಂದೆರೆಡು ತಿಂಗಳಿಂದ ಏಲಕ್ಕಿ ಫಸಲಿನ ಧಾರಣೆ ಅನಿರೀಕ್ಷಿತ ಮಾದರಿಯಲ್ಲಿ ಹೆಚ್ಚಾಗುತ್ತಿದೆ ಹಲವು ಕಾರಣಗಳಿಂದ ನಿರ್ಲಕ್ಷ್ಯಕ್ಕೆ ತುತ್ತಾಗಿದ್ದ ಏಲಕ್ಕಿ ಫಸಲಿನ ಕಡೆಗಣನೆಯಿಂದ ಈ ಹಿಂದೆ ಉತ್ತಮ ರೀತಿಯಲ್ಲಿ ಬೆಳೆಯುತ್ತಿದ್ದ ಬೆಳೆಗಾರರು ಪ್ರಸ್ತುತ ನಿರಾಶೆ ಅನುಭವಿಸುವ ಸನ್ನಿವೇಶ ಕಳೆದ ಒಂದೆರೆಡು ತಿಂಗಳಿಂದ ಏಲಕ್ಕಿ ಫಸಲಿನ ಧಾರಣೆ ಅನಿರೀಕ್ಷಿತ ಮಾದರಿಯಲ್ಲಿ ಹೆಚ್ಚಾಗುತ್ತಿದೆ ಹಲವು ಕಾರಣಗಳಿಂದ ನಿರ್ಲಕ್ಷ್ಯಕ್ಕೆ ತುತ್ತಾಗಿದ್ದ ಏಲಕ್ಕಿ ಫಸಲಿನ ಕಡೆಗಣನೆಯಿಂದ ಈ ಹಿಂದೆ ಉತ್ತಮ ರೀತಿಯಲ್ಲಿ ಬೆಳೆಯುತ್ತಿದ್ದ ಬೆಳೆಗಾರರು ಪ್ರಸ್ತುತ ನಿರಾಶೆ ಅನುಭವಿಸುವ ಸನ್ನಿವೇಶ 2300ರಷ್ಟು ಧಾರಣೆ ಕಂಡುಬಂದಿದೆ. ಕಳೆದ ವರ್ಷ ಇದೇ ಫಸಲಿಗೆ ರೂ. 1000ರಿಂದ ರೂ. 1300ರಷ್ಟು ಮಾತ್ರ ಬೆಲೆ ದೊರೆತಿತ್ತು.
ಶೇ. 45ರಷ್ಟು ಉತ್ಪಾದನೆ ಕುಂಠಿತ
ಕೊಡಗು ಜಿಲ್ಲೆ ಒಳಗೊಂಡಂತೆ ಕರ್ನಾಟಕದ ಇತರ ಮಲೆನಾಡು ಜಿಲ್ಲೆಗಳಲ್ಲಿ ಕಳೆದ ವರ್ಷ ಅತಿವೃಷ್ಟಿ ಹಾಗೂ ನೆರೆಯ ಕೇರಳ ರಾಜ್ಯದಲ್ಲಿಯೂ ಉದ್ಭವವಾದ ಜಲಪ್ರಳಯದಿಂದಾಗಿ ಕಳೆದ ಸಾಲಿನ ಉತ್ಪಾದನೆಯಲ್ಲಿ ಶೇ. 45ರಷ್ಟು ಕುಂಠಿತವಾಗಿದೆ ಎನ್ನಲಾಗಿದೆ. ಈ ಪರಿಣಾಮವೇ ಈಗಿನ ಧಾರಣೆ ಏರಿಕೆಗೆ ಕಾರಣವೆಂದು ವಿಶ್ಲೇಷಿಸಲಾಗುತ್ತಿವೆ. ಇದರೊಂದಿಗೆ ಪ್ರಸಕ್ತ ಸಾಲಿನಲ್ಲಿ ಮಾರ್ಚ್ - ಏಪ್ರಿಲ್ ತಿಂಗಳಿನಲ್ಲಿ ಏಲಕ್ಕಿಗೆ ನಿರೀಕ್ಷಿತವಾದ ಮಳೆಯಾಗದಿರುವದರಿಂದ ಏಲಕ್ಕಿ ಕಾಯಿ ಹೂ ಬಿಡುವದು ವಿಳಂಬವಾಗಿದ್ದು, ವ್ಯತಿರಿಕ್ತ ಪರಿಣಾಮ ಉಂಟಾಗಿದೆ.
(ಮೊದಲ ಪುಟದಿಂದ) ಕೇರಳ ರಾಜ್ಯದಲ್ಲಿ ಈ ವೇಳೆಗಾಗಲೇ ಕಟಾವು ಆರಂಭಗೊಂಡಿರುತ್ತಿತ್ತು ಎಂದು ಪರಿಣತರು ಹೇಳುತ್ತಾರೆ. ಆದರೆ ಹವಾಮಾನ ವೈಪರಿತ್ಯದಿಂದಾಗಿ ಕೇರಳದಲ್ಲಿ ಗಿಡ ಇದ್ದರೂ, ಫಸಲು ಇಲ್ಲ. ಬಹುತೇಕ ಕೊಡಗು ಹಾಗೂ ರಾಜ್ಯದ ಇತರ ಜಿಲ್ಲೆಗಳಲ್ಲಿಯೂ ಪ್ರಸ್ತುತ ಏಲಕ್ಕಿ ಬೆಳೆ ಕಡಿಮೆ ಇದ್ದು, ಇರುವ ಜಾಗದಲ್ಲೂ ಇದೇ ಸನ್ನಿವೇಶವಿದೆ. ಕಳೆದ ವರ್ಷ ಕೊಡಗಿನಲ್ಲಿ ಏಲಕ್ಕಿ ಬೆಳೆಯಿದ್ದ ಹಲವಾರು ಗ್ರಾಮೀಣ ಪ್ರದೇಶಗಳಲ್ಲಿ ಬರೆ ಕುಸಿತ, ಬೆಟ್ಟ ಜರಿತ, ಮರಗಳು ಬಿದ್ದು ಗಿಡಗಳು ನಾಶವಾಗಿವೆ.
ಹೊಸ ಆಸಕ್ತಿ
ಪ್ರಸ್ತುತ ಏಲಕ್ಕಿ ಧಾರಣೆ ಅಧಿಕವಾಗಿರುವ ಹಿನ್ನೆಲೆಯಲ್ಲಿ ಈ ಕೃಷಿಯತ್ತ ಮತ್ತೆ ಬೆಳೆಗಾರರು ಆಸಕ್ತಿ ತೋರುತ್ತಿದ್ದಾರೆ ಎನ್ನಲಾಗಿದೆ. ಅಂತರ್ ಬೆಳೆಯ ಬದಲಾಗಿ ಇದನ್ನು ವಾಣಿಜ್ಯ ರೀತಿಯಲ್ಲೂ ಬೆಳೆಯಲು ಹಾಸನ ಮತ್ತಿತರ ಕಡೆಗಳಲ್ಲಿ ಜನರು ಮುಂದಾಗಿರುವದು ಹೊಸ ಬೆಳವಣಿಗೆಯಾಗಿದೆ.
ಗಿಡಗಳಿಗೆ ಬೇಡಿಕೆ
ಸಂಬಾರ ಮಂಡಳಿಯ ಮೂಲಕ ರಾಜ್ಯದಲ್ಲಿ ಐದು ನರ್ಸರಿ ಗಳಿದ್ದು, ಇಲ್ಲಿ ಏಲಕ್ಕಿ ಗಿಡಗಳನ್ನು ಬೆಳೆಯಲಾಗಿದೆ. ಬೆಳಗೊಳ, ಬೆಟ್ಟದಮನೆ, ಯಸಳೂರು ಹಾಗೂ ಕೊಡಗಿನ ಬಿಳಿಗೇರಿ ಹಾಗೂ ಐಗೂರಿನಲ್ಲಿ ಸಂಬಾರ ಮಂಡಳಿಯ ನರ್ಸರಿಗಳಿದ್ದು, ಇಲ್ಲಿ ಗಿಡಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದರೊಂದಿಗೆ ಹಲವರು ಸ್ವಂತವಾಗಿಯೂ ನರ್ಸರಿ ಮಾಡಿದ್ದಾರೆ. ಒಂದೊಮ್ಮೆ ಸಂಬಾರ ಪದಾರ್ಥಗಳ ಪೈಕಿ ಘಮ ಘಮಿಸುವ ಏಲಕ್ಕಿ ಉತ್ಪಾದನೆ ತೀರಾ ಕಡಿಮೆಯಾಗಿದ್ದು, ಈಗಿನ ಬದಲಾವಣೆಯಿಂದ ಮುಂದೇನಾಗ ಬಹುದು ಎಂಬ ಆಸಕ್ತಿ ಎದುರಾಗಿದೆ.
ತೋಟಗಳೂ ಪರಿವರ್ತನೆ
ಏಲಕ್ಕಿ ಬೆಳೆಯುವವರು, ತ್ರಾಸದಾಯಕ ಹಾಗೂ ಲಾಭದಾಯ ಕವಲ್ಲದ ಕಾರಣದಿಂದಾಗಿ ಏಲಕ್ಕಿ ತೋಟಗಳು ಕಾಫಿ ಮತ್ತಿತರ ಬೆಳೆಗಳ ಜಾಗವಾಗಿ ಪರಿವರ್ತನೆಗೊಂಡಿದ್ದವು. ಸಂಬಾರ ಮಂಡಳಿಯ ಮೂಲಕ ಹಲವು ಯೋಜನೆಗಳಿದ್ದರೂ, ಇದನ್ನು ಬಳಸಿಕೊಳ್ಳುವವರ ಸಂಖ್ಯೆ ವಿರಳವಾಗಿತ್ತು. ಆದರೂ, ಕೆಲವೊಂದು ಯೋಜನೆಗಳಿಂದಾಗಿ ಸ್ವಲ್ಪ ಮಟ್ಟಿಗೆ ಏಲಕ್ಕಿ ಬೆಳೆ ಉಳಿದುಕೊಂಡಿತ್ತು ಎಂದು ಮಂಡಳಿಯ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ. ರಾಜ್ಯದಲ್ಲಿ ಏಲಕ್ಕಿ ಫಸಲಿಗೆ ಸೌಲಭ್ಯಗಳನ್ನು ಎಲ್ಲಾ ಕಡೆಗೆ ನೀಡಲಾಗುತ್ತಿಲ್ಲ. ಕೆಲವು ಪ್ರದೇಶಗಳನ್ನು ಮಾತ್ರ ‘ನೋಟಿಫೈಡ್ ಏರಿಯಾ’ ಎಂದು ಪರಿಗಣಿಸ ಲಾಗಿದ್ದು, ಅಲ್ಲಿ ಮಾತ್ರ ಏಲಕ್ಕಿ ಬೆಳೆಗೆ ವೈಜ್ಞಾನಿಕವಾಗಿ ಸಲಹೆ ನೀಡಲಾಗು ತ್ತಿದೆ. ಕೊಡಗು ಜಿಲ್ಲೆಯ ಮೂರು ತಾಲೂಕುಗಳು ಇದರಲ್ಲಿ ಒ¼ Àಗೊಂಡಿವೆ. ಇದರೊಂದಿಗೆ ಹಾಸನದ ಸಕಲೇಶಪುರ, ಬೇಲೂರು, ಅರಕಲಗೂಡು, ಚಿಕ್ಕಮಗಳೂರಿನ ಚಿಕ್ಕಮಗಳೂರು ಕ.ಸ.ಬಾ., ಮೂಡಿಗೆರೆ, ಎನ್.ಆರ್. ಪುರ, ಕೊಪ್ಪ, ಶಿವಮೊಗ್ಗದ ಸಾಗರ, ಸೊರಬ, ಉತ್ತರ ಕನ್ನಡದ ಶಿರಸಿ ವ್ಯಾಪ್ತಿಗಳಲ್ಲಿ ಮಾತ್ರ (ಮಲೆನಾಡು ಪ್ರದೇಶಗಳು) ಈ ಬೆಳೆಗೆ ಉತ್ತೇಜನ ನೀಡಲಾಗುತ್ತಿದೆ.
ಈ ವರ್ಷ ಇನ್ನೂ ಕುಂಠಿತ
ಕಳೆದ ವರ್ಷ ದೇಶದಲ್ಲಿ ಸುಮಾರು 20 ಸಾವಿರ ಟನ್ಗಳಷ್ಟು ಏಲಕ್ಕಿ ಉತ್ಪಾದನೆಯಾಗಿದೆ ಎಂದು ಅಂದಾಜಿಸಲಾಗಿದೆ. ಆದರೆ ಪ್ರಸಕ್ತ ವರ್ಷ ಕಳೆದ ವರ್ಷದ ಹವಾಮಾನ ವೈಪರಿತ್ಯದಿಂದಾಗಿ ಈ ಪ್ರಮಾಣ 7 ರಿಂದ 8 ಸಾವಿರ ಟನ್ಗೆ ಕುಸಿಯುವ ಸಂಭವವಿದೆ ಎನ್ನಲಾಗುತ್ತಿದೆ.
ಕೊಡಗು ಜಿಲ್ಲೆಯನ್ನು ತೆಗೆದುಕೊಂಡರೂ, ಇಲ್ಲಿ ಪ್ರಸ್ತುತ ಎಷ್ಟು ಹೆಕ್ಟೇರ್ನಲ್ಲಿ ಬೆಳೆಯಿದೆ, ಎಷ್ಟು ಉತ್ಪಾದನೆಯಾಗಬಹುದು ಎಂದು ನಿಖರವಾಗಿ ಹೇಳಲಾಗದು.