ಸೋಮವಾರಪೇಟೆ, ಜೂ. 19: ಸಮೀಪದ ಬಜೆಗುಂಡಿ ಗ್ರಾಮದ ಹಯಾತುಲ್ ಇಸ್ಲಾಂ ಮದರಸದಲ್ಲಿ ವಾರ್ಷಿಕ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮದರಸದ ಧರ್ಮಗುರು ಹಂಸ ಮಿಸ್ಬಾಯಿ ಉಪನ್ಯಾಸ ನೀಡಿದರು. ಜಮಾಅತ್ನ ಅಧ್ಯಕ್ಷ ಕೆ.ಎ. ಯಾಕೂಬ್ ಮಾತನಾಡಿ, ಮಕ್ಕಳಿಗೆ ಮದರಸ ವಿದ್ಯಾಭ್ಯಾಸ ಅತ್ಯಗತ್ಯ. ಕುಟುಂಬ, ಬದುಕು, ಹಿರಿಯರ ಮೇಲಿನ ಗೌರವ, ಸಹೋದರತೆ, ದೇಶಪ್ರೇಮ ಇವುಗಳು ಮದರಸ ವಿದ್ಯಾಭ್ಯಾಸದಲ್ಲೇ ದೊರಕುತ್ತವೆ. ಈ ಶಿಕ್ಷಣದೊಂದಿಗೆ ಉನ್ನತ ಶಿಕ್ಷಣವನ್ನು ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಜಮಾಅತ್ ಕಾರ್ಯದರ್ಶಿ ಸುಲೈಮಾನ್, ಪದಾಧಿಕಾರಿಗಳಾದ ನಿಯಾಜ್, ಮುನೀರ್, ಇಬ್ರಾಹಿಂ ಮತ್ತಿತರರು ಉಪಸ್ಥಿತರಿದ್ದರು.